ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಆರೋಗ್ಯ ಸಂಸ್ಥೆ ಮೇಲೆ ಚೀನಾ ನಿಯಂತ್ರಣ: ಡೊನಾಲ್ಡ್ ಟ್ರಂಪ್ ಆರೋಪ

Last Updated 30 ಮೇ 2020, 21:35 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಜತೆಗಿರುವ ಸಂಬಂಧವನ್ನುಕೊನೆಗೊಳಿಸುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಚೀನಾವು ವಿಶ್ವ ಆರೋಗ್ಯ ಸಂಸ್ಥೆಗೆ ಸುಮಾರು ₹300 ಕೋಟಿಗಳಷ್ಟು ಹಣ ನೀಡುತ್ತಿದೆ. ಆದರೆ, ಅಮೆರಿಕವು ₹ 3000 ಕೋಟಿಗೂ ಹೆಚ್ಚು ಹಣ ನೀಡುತ್ತಿದ್ದರೂ, ಚೀನಾ ಡಬ್ಲ್ಯುಎಚ್‌ಒ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದೆ. ಈ ಕಾರಣಕ್ಕಾಗಿ ಅಮೆರಿಕವು ತನ್ನ ಸಂಬಂಧ ಕೊನೆಗೊಳಿಸುತ್ತಿರುವುದಾಗಿ ಅವರು ರೋಸ್‌ಗಾರ್ಡನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿಹೇಳಿದ್ದಾರೆ.

ಜಾಗತಿಕವಾಗಿ ಕೋವಿಡ್‌–19 ಹರಡುವಿಕೆ ಮತ್ತು ಸಾವು–ನೋವುಗಳಿಗೆ ಚೀನಾ ಕಾರಣವಾಗಿದೆ. ಈ ವಿಚಾರದಲ್ಲಿ ಅದು ಪಾರದರ್ಶಕತೆ ಪ್ರದರ್ಶಿಸಲಿಲ್ಲ ಎಂದು ದೂಷಿಸಿರುವ ಅವರು, ಅಮೆರಿಕದಲ್ಲಿ ಚೀನಾದ ಹೂಡಿಕೆ ಸೇರಿದಂತೆ ಮತ್ತಿತರ ವಿಷಯಗಳಲ್ಲಿ ಬಿಗಿನಿಲುವು ತಾಳುವುದಾಗಿ ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಹಣವನ್ನು ಇನ್ನು ಮುಂದೆ ಜಾಗತಿಕ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ನೀಡಲಾಗುವುದು. ಅಮೆರಿಕ, ಹಾಂಗ್‌ಕಾಂಗ್‌ಗೆ ನೀಡಿದ್ದ ವಿಶೇಷ ಸ್ಥಾನಮಾನವನ್ನೂ ವಾಪಸ್ ಪಡೆಯುತ್ತಿದೆ.ಅಮೆರಿಕದ ರಹಸ್ಯ ಮಾಹಿತಿಗಳನ್ನು ಕದಿಯಲು ಚೀನಾ ಸರ್ಕಾರ ಗೂಢಚರ್ಯೆ ನಡೆಸಿದೆ. ಇಂಡೊ–ಫೆಸಿಫಿಕ್ ಸಾಗರದಲ್ಲಿ ಕಾನೂನುಬಾಹಿರವಾಗಿ ಭೂಪ್ರದೇಶಗಳನ್ನು ವಶಪಡಿಸಿಕೊಂಡಿದೆ ಎಂದೂ ಟ್ರಂಪ್ ದೂರಿದ್ದಾರೆ.

ಜಾಗತಿಕ ಆರೋಗ್ಯಕ್ಕೆ ಹಾನಿ
ಬರ್ಲಿನ್ (ಎಎಫ್‌ಪಿ):
‘ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸಂಬಂಧ ಕಡಿದುಕೊಂಡಿರುವುದು ನಿರಾಶಾದಾಯಕ ಮತ್ತು ಇದರಿಂದ ಜಾಗತಿಕ ಆರೋಗ್ಯಕ್ಕೆ ಹಿನ್ನಡೆಯಾಗಲಿದೆ’ ಎಂದು ಜರ್ಮನ್ ಆರೋಗ್ಯ ಸಚಿವ ಜೇನ್ಸ್ ಸ್ಪಾಹ್ನ ಅಭಿಪ್ರಾಯಪಟ್ಟಿದ್ದಾರೆ.

‘ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಸುಧಾರಣೆಯ ಅಗತ್ಯವಿದೆ. ಐರೋಪ್ಯ ಒಕ್ಕೂಟ ಈ ನಿಟ್ಟಿನಲ್ಲಿ ಸುಧಾರಣೆ ಮಾಡಲು ಮುಂದಾಗಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT