ಶನಿವಾರ, ಜೂಲೈ 4, 2020
24 °C

Covid-19 World Update: ರಷ್ಯಾದಲ್ಲಿ 15 ಹೊಸ ಪ್ರಕರಣ ಪತ್ತೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಜಾನ್ಸ್ ಹಾಪ್ಕಿನ್ಸ್ ಕೊರೊನಾವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ ಜಗತ್ತಿನಾದ್ಯಂತ ವರದಿಯಾಗಿರುವ ಸೋಂಕು ಪ್ರಕರಣಗಳ ಸಂಖ್ಯೆ 4387438 ಆಗಿದೆ. ಅಮೆರಿಕದಲ್ಲಿ- 1395265, ರಷ್ಯಾ-  252245, ಬ್ರಿಟನ್- 234431 ಮಂದಿಗೆ ಸೋಂಕು ತಗುಲಿದೆ. ಇಲ್ಲಿಯವರೆಗೆ  298392 ಮಂದಿ ಸಾವಿಗೀಡಾಗಿದ್ದಾರೆ. ಈ ಪೈಕಿ ಅಮೆರಿಕ-84313, ಬ್ರಿಟನ್-33692, ಇಟಲಿ-31106 ಮಂದಿ ಸಾವಿಗೀಡಾಗಿದ್ದಾರೆ

ಬಾಂಗ್ಲಾದೇಶದಲ್ಲಿರುವ ರೋಹಿಂಗ್ಯಾ ಶಿಬಿರದಲ್ಲಿರುವ ಇಬ್ಬರಿಗೆ ಕೊರೊನಾಸೋಂಕು ಪತ್ತೆಯಾಗಿದೆ. ಇದೇ ಮೊದಲ ಬಾರಿ ರೋಹಿಂಗ್ಯಾಗಳಿಗೆ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. 

ಬಲೂಚಿಸ್ತಾನದ ವಿತ್ತ ಸಚಿವ ಜಹೂರ್ ಬುಲೇದಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬುಲೇದಿ ಅವರಿಗೆ ರೋಗ ಲಕ್ಷಣಗಳೇನೂ ಇರಲಿಲ್ಲ. ಸೋಂಕು ತಗುಲಿರುವ ಬಗ್ಗೆ ಅವರೇ ಟ್ವೀಟಿಸಿದ್ದು ಸ್ವಯಂ ಕ್ವಾರಂಟೈನಲ್ಲಿರುವುದಾಗಿ ಹೇಳಿದ್ದಾರೆ . 

ಚೀನಾದಲ್ಲಿ ಗುರುವಾರ ಹೊಸ 15 ಪ್ರಕರಣಗಳು ಪತ್ತೆಯಾಗಿದೆ. ಇದರಲ್ಲಿ 12 ಮಂದಿಗೆ ರೋಗಲಕ್ಷಣಗಳು ಇರಲಿಲ್ಲ.ಇತ್ತ ವುಹಾನ್ ನಗರದಲ್ಲಿ 11 ದಶಲಕ್ಷ ಜನರನ್ನು ತಪಾಸಣೆಗೊಳಪಡಿಸಲಾಗಿದೆ.
ಜಾಗತಿಕವಾಗಿ ಅಮೆರಿಕ ಹೆಚ್ಚು ಕೊರೊನಾ ಬಾಧಿತ ರಾಷ್ಟ್ರವಾಗಿದ್ದು, 13,89,935 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಬಾಲ್ಟಿಮೋರ್‌ ಮೂಲದ ಶಾಲೆಯೊಂದು ವರದಿ ಮಾಡಿದೆ. 

ಇಂಗ್ಲೆಂಡ್‌ನಲ್ಲಿ 1,31,932 ಮಂದಿ ಸೋಂಕಿನಿಂದ ಬಳಲುತ್ತಿದ್ದು, 27,432 ಮಂದಿ ಸಾವಿಗೀಡಾಗಿದ್ದಾರೆ. ರಷ್ಯಾದಲ್ಲಿ 2,42,271 ಮಂದಿಗೆ ಸೋಂಕು ತಗುಲಿದ್ದು, 2,212 ಮಂದಿ ಮೃತಪಟ್ಟಿದ್ದಾರೆ. 

ಸ್ಪೇನ್‌ನಲ್ಲಿ 271,095 ಮಂದಿ ಸೋಂಕಿತರಿದ್ದು, 27,104 ಮಂದಿ ಮೃತಪಟ್ಟಿದ್ದಾರೆ. ಇಟಲಿಯಲ್ಲಿ 2,22,104 ಮಂದಿಗೆ ಸೋಂಕು ದೃಢಪಟ್ಟಿದ್ದು, 31,106 ಮಂದಿ ಸಾವನಪ್ಪಿದ್ದಾರೆ.

ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ 35,298 ಮಂದಿಗೆ ಕೋವಿಡ್‌ ಸೋಂಕು ತಗುಲಿದ್ದು, ಇವರೆಗೂ 761 ಮಂದಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು