ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್ ಹಿಡಿತದಲ್ಲಿ ಯುರೋಪ್‌: ವಿಶ್ವ ಆರೋಗ್ಯ ಸಂಸ್ಥೆ

Last Updated 1 ಮೇ 2020, 3:25 IST
ಅಕ್ಷರ ಗಾತ್ರ

ಜಿನೇವಾ: ಅನೇಕ ದೇಶಗಳು ನಿರ್ಬಂಧಿತ ಕ್ರಮಗಳನ್ನು ಸಡಿಲಗೊಳಿಸುತ್ತಿವೆ. ಆದರೆ, ಯುರೋಪ್ ಖಂಡ ಮಾತ್ರ ಇನ್ನೂ ಕೊರೊನಾ ವೈರಸ್ ಹಿಡಿತದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪಿಯನ್ ಕಚೇರಿಯ ಮುಖ್ಯಸ್ಥ ಡಾ.ಹ್ಯಾನ್ಸ್ ಕ್ಲುಗೆ ಎಚ್ಚರಿಕೆ ನೀಡಿದ್ದಾರೆ.

‘ಜಾಗತಿಕ ಮಟ್ಟದ ಪ್ರಕರಣಗಳಲ್ಲಿ ಶೇ 63ರಷ್ಟು ಸಾವುಗಳುಂಟಾಗಿವೆ.ಯುರೋಪಿಯನ್ ಪ್ರಾಂತ್ಯದಲ್ಲಿ ಶೇ 45ರಷ್ಟು ಪ್ರಕರಣಗಳು ವರದಿಯಾಗಿವೆ. ಯುರೋಪ್ ಇನ್ನೂ ವೈರಸ್‌ನ ನಿಯಂತ್ರಣದಲ್ಲಿದೆ’ ಎಂದು ಹೇಳಿದ್ದಾರೆ.

ಸೋಂಕಿನ ಪ್ರಕರಣಗಳು ಕಡಿಮೆಗೊಳ್ಳುತ್ತಿರುವ ಪ್ರದೇಶಗಳಲ್ಲಿ ದೈಹಿಕ ಅಂತರ ಕಾಪಾಡಿಕೊಂಡಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿರುವ ಡಾ. ಹ್ಯಾನ್ಸ್, ‘ನಾವು ಈ ಸಕಾರಾತ್ಮಕ ಬೆಳವಣಿಗೆಯನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಬೇಕು’ ಎಂದು ತಿಳಿಸಿದ್ದಾರೆ.

ಇಟಲಿ, ಫ್ರಾನ್ಸ್, ಬ್ರಿಟನ್, ಜರ್ಮನಿ ಮತ್ತು ಸ್ಪೇನ್ ದೇಶಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳಿವೆ. ಬೆಲರಸ್, ರಷ್ಯಾ, ಕಜಗಿಸ್ತಾನ ಮತ್ತು ಉಕ್ರೇನ್‌ ದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಿಶ್ವಆರೋಗ್ಯ ಸಂಸ್ಥೆಯ ಯುರೋಪಿಯನ್‌ ಪ್ರಾದೇಶಿಕ ಘಟಕ ಲಾಕ್‌ಡೌನ್‌ ಹೇರಿದ್ದ 44 ದೇಶಗಳ ಪೈಕಿ ಈಗಾಗಲೇ 21 ದೇಶಗಳು ನಿರ್ಬಂಧ ಸಡಿಲಿಸಿವೆ. ಮುಂದಿನ ದಿನಗಳಲ್ಲಿ ಇನ್ನೂ 11 ರಾಷ್ಟ್ರಗಳು ನಿರ್ಬಂಧ ಸಡಿಲಿಸುವ ಯೋಜನೆ ಹೊಂದಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಈ ವೈರಸ್‌ಗೆ ಕ್ಷಮಾಗುಣವಿಲ್ಲ. ಹಾಗಾಗಿ ನಾವು ಎಚ್ಚರಿಕೆಯಿಂದಿರಬೇಕು. ಇದಕ್ಕಾಗಿ ನಾವು ಸತತವಾಗಿ ತಾಳ್ಮೆಯಿಂದಿದ್ದು ಪ್ರಯತ್ನಿಸಬೇಕು. ಅಗತ್ಯಬಿದ್ದಾಗ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಾಗಬೇಕು. ಕೋವಿಡ್–19 ಸದ್ಯಕ್ಕೆ ಹೋಗುವ ಲಕ್ಷಣಗಳಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT