ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾವೈರಸ್ ಸೋಂಕಿನ ಮೊದಲ ಅಲೆ ಇನ್ನೂ ಮುಗಿದಿಲ್ಲ: ವಿಶ್ವ ಆರೋಗ್ಯ ಸಂಸ್ಥೆ

Last Updated 26 ಮೇ 2020, 15:05 IST
ಅಕ್ಷರ ಗಾತ್ರ

ಬ್ಯಾಂಕಾಕ್: ಬ್ರೆಜಿಲ್ ಮತ್ತು ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತವೇ ಇದ್ದು, ವಿಶ್ವವು ಈ ಜಾಗತಿಕ ಪಿಡುಗಿನ ಮಧ್ಯದಲ್ಲಿದೆ ಎಂದು ಹಿರಿಯ ಆರೋಗ್ಯ ತಜ್ಞರು ಹೇಳಿದ್ದಾರೆ.

ಪ್ರಸ್ತುತ ನಾವು ಎರಡನೇ ಅಲೆಯಲ್ಲಿ ಇಲ್ಲ. ಕೊರೊನಾವೈರಸ್ ಜಾಗತಿಕ ಪಿಡುಗಿನ ಮೊದಲ ಅಲೆಯ ನಡುವೆ ಇಡೀ ಜಗತ್ತು ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಡಾ.ಮೈಕ್ ರೆಯಾನ್ ಹೇಳಿದ್ದಾರೆ.

ರೋಗ ಮತ್ತಷ್ಟು ಏರಿಕೆಯಾಗುವ ಹಂತದಲ್ಲಿ ನಾವೀಗ ಇದ್ದೀವೆ. ದಕ್ಷಿಣ ಆಫ್ರಿಕಾ, ದಕ್ಷಿಣ ಏಷ್ಯಾ ಮತ್ತು ಇತರ ಪ್ರದೇಶಗಳಲ್ಲಿ ಪ್ರಕರಣಗಳು ಏರಿಕೆಯಾಗುತ್ತಿದೆ ಎಂದು ರೆಯಾನ್ ಹೇಳಿದ್ದಾರೆ.

ಸತತ ಏಳನೇ ದಿನ ಭಾರತದಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಮಂಗಳವಾರ ಭಾರತದಲ್ಲಿ 6,535 ಹೊಸ ಪ್ರಕರಣಗಳು ವರದಿಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 1,45,380ಕ್ಕೇರಿದೆ. ಈವರೆಗೆ ಒಟ್ಟು 4,167 ಮಂದಿ ಸಾವಿಗೀಡಾಗಿದ್ದಾರೆ.
ಭಾರತದ ಬಡ ಜನರು ಜಾಸ್ತಿ ಇರುವ, ಜನ ಸಾಂದ್ರತೆ ಇರುವ ಪ್ರದೇಶದಲ್ಲಿ ವೈರಸ್ ವ್ಯಾಪಕವಾಗಿ ಹಬ್ಬಿದ್ದು ಅದನ್ನು ನಿಯಂತ್ರಿಸುವುದು ಸವಾಲಾಗಿ ಪರಿಣಮಿಸಿದೆ.

ಮಹಾರಾಷ್ಟ್ರ ಮತ್ತು ಗುಜರಾತಿನಲ್ಲಿ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿದ್ದು, ವಲಸೆ ಕಾರ್ಮಿಕರು ಅವರವರ ಗ್ರಾಮಕ್ಕೆ ಮರಳಿರುವುದರಿಂದ ಅಲ್ಲಿಯೂ ಸೋಂಕು ವ್ಯಾಪಿಸಿದೆ. ಇದರ ಮಧ್ಯೆಯೇ ಭಾರತದಲ್ಲಿ ವಿಮಾನ ಹಾರಾಟ ಆರಂಭವಾಗಿದೆ.

ಆದಾಗ್ಯೂ, ಆರ್ಥಿಕತೆ ಮತ್ತೆ ಆರಂಭ ಮಾಡಲು ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸನರೊ ಮತ್ತು ಇತರರು ಚಿಂತನೆ ಮಾಡಿದ್ದರು. ಆದರೆ ವೈರಸ್ ವ್ಯಾಪಿಸುವುದನ್ನು ನಿಯಂತ್ರಿಸಲು ತ್ವರಿತಪರೀಕ್ಷೆಗಳನ್ನು ಮಾಡಬೇಕಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಬ್ರೆಜಿಲ್‌ನಲ್ಲಿ 3,75,000 ಕೊರೊನಾವೈರಸ್ ಪ್ರಕರಣಗಳಿದ್ದು ಅಮೆರಿಕದಲ್ಲಿ 1.6 ದಶಲಕ್ಷ ಪ್ರಕರಣಗಳಿವೆ. ಅಮೆರಿಕದಲ್ಲಿ 23,000 ಮಂದಿ ಸಾವಿಗೀಡಾಗಿದ್ದು, ಬ್ರೆಜಿಲ್‌ನಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಬ್ರೆಜಿಲ್‌ನಲ್ಲಿ ಸೋಂಕು ಹರಡುವ ದರ ಜಾಸ್ತಿಯಾಗಿದ್ದು ಆರ್ಥಿಕತೆಯ ಮೇಲೆ ಪರಿಣಾಮ ಬೀರುವುದರ ಬಗ್ಗೆ ಚಿಂತಿಸುವ ಬದಲುಜನರು ಮನೆಯಲ್ಲೇ ಇರುವ ಕ್ರಮಕೈಗೊಳ್ಳಬೇಕು. ನಿಮ್ಮಿಂದ ಏನು ಸಾಧ್ಯವೋ ಅದನ್ನೆಲ್ಲ ಮಾಡಬೇಕು ಎಂದು ರೆಯಾನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT