ಶುಕ್ರವಾರ, ಫೆಬ್ರವರಿ 28, 2020
19 °C
ಟೆಲಿಕಾಂ ಇಲಾಖೆಯಿಂದ ಬಿಎಸ್‌ಎನ್‌ಎಲ್, ಎಂಟಿಎನ್‌ಎಲ್‌ಗೆ ಪುನಶ್ಚೇತನ ಪ್ಯಾಕೇಜ್

ಏಪ್ರಿಲ್‌ನಿಂದ ಬಿಎಸ್‌ಎನ್‌ಎಲ್‌ಗೆ 4ಜಿ ತರಂಗಗುಚ್ಛ ಹಂಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಟೆಲಿಕಾಂ ಇಲಾಖೆಯು ಏಪ್ರಿಲ್ 1ರಿಂದ ಬಿಎಸ್‌ಎನ್ಎಲ್‌ಗೆ 4ಜಿ ತರಂಗಗುಚ್ಛ ಹಂಚಿಕೆ ಮಾಡಲಿದ್ದು, ಮುಂದಿನ 19 ತಿಂಗಳೊಳಗೆ ಬಿಎಸ್‌ಎನ್‌ಎಲ್ 4ಜಿ ಸೇವೆಯನ್ನು ಆರಂಭಿಸಲಿದೆ ಎಂದು ಕೇಂದ್ರ ಸರ್ಕಾರ ಗುರುವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 

‘ಬಿಎಸ್‌ಎನ್ಎಲ್ ಮತ್ತು ಎಂಟಿಎನ್‌ಎಲ್‌ಗೆ ಸೇರಿದ ಜಾಗ ಮತ್ತು ಇತರ ಆಸ್ತಿಗಳನ್ನು ಇವುಗಳ ಪುನಶ್ಚೇತನ ಪ್ಯಾಕೇಜ್‌ಗೆ ಬಳಸಿಕೊಳ್ಳಲಾಗುವುದು’ ಎಂದು ಐಟಿ ಮತ್ತು ಟೆಲಿಕಾಂ ಖಾತೆ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು. 

‘ಟೆಲಿಕಾಂ ಸೇವಾ ಪೂರೈಕೆದಾರರಾದ (ಟಿಎಸ್‌ಪಿ), ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ತಮ್ಮ ಮೂಲಸೌಕರ್ಯಗಳನ್ನು ಹಂಚಿಕೊಳ್ಳಲು ಸರ್ಕಾರ  ಕಾನೂನು ರೀತಿ ನಿಯಮಗಳನ್ನು ರೂಪಿಸಿದೆ’ ಎಂದು ರವಿಶಂಕರ್ ಪ್ರಸಾದ್ ತಮ್ಮ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. 

‘ರಿಲಯನ್ಸ್‌ನ ಜಿಯೊ ಕಂಪನಿಯಂದ ಕ್ರಮವಾಗಿ ₹167.97 ಕೋಟಿ ಹಾಗೂ ₹11.62 ಕೋಟಿ ಬಾಕಿ ಇದೆ ಎಂದು ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಮಾಹಿತಿ ನೀಡಿವೆ’ ಎಂದೂ ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು