ಗುರುವಾರ , ಮೇ 6, 2021
30 °C

ಅಹಮದಾಬಾದ್‌ನಲ್ಲಿ ಎಬಿವಿಪಿ- ಎನ್‌ಎಸ್‌ಯುಐ ಸಂಘರ್ಷ; 10 ಮಂದಿಗೆ ಗಾಯ

ಎಎನ್ಐ Updated:

ಅಕ್ಷರ ಗಾತ್ರ : | |

Clash between ABVP and NSUI workers in Ahmedabad

ಅಹಮದಾಬಾದ್: ಜೆಎನ್‌ಯುನಲ್ಲಿ ನಡೆದ ಹಿಂಸಾಚಾರ ಖಂಡಿಸಿ ಅಹಮದಾಬಾದ್‌ನಲ್ಲಿರುವ ಎಬಿವಿಪಿ ಕಚೇರಿ ಸಮೀಪ ಎನ್‌ಎಸ್‌ಯುಐ ಪ್ರತಿಭಟನೆ ನಡೆಸಿದ್ದು ಈ ವೇಳೆ ಎಬಿವಿಪಿ- ಎನ್‌ಎಸ್‌ಯುಐ ಕಾರ್ಯಕರ್ತರ ನಡುವೆ ಸಂಘರ್ಷವುಂಟಾಗಿದೆ. ಈ ಗಲಭೆಯಲ್ಲಿ 10 ಮಂದಿಗೆ ಗಾಯಗಳಾಗಿದ್ದು, ಗುಂಪು ಚದುರಿಸುವುದಕ್ಕಾಗಿ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ.

ಎಬಿವಿಪಿ ಕಾರ್ಯಕರ್ತರು ಎನ್‌ಎಸ್‌ಯುಐ ಕಾರ್ಯಕರ್ತರ ಮೇಲೆ ನಡೆಸಿದ ಹಲ್ಲೆಯನ್ನು ಖಂಡಿಸಿದ ಎನ್‌ಎಸ್‌ಯುಐ  ರಾಷ್ಟ್ರೀಯ ಅಧ್ಯಕ್ಷ ನೀರಜ್ ಕುಂದನ್ ಇದು ಬಿಜೆಪಿಯ ದಬ್ಬಾಳಿಕೆ ಎಂದು ಆರೋಪಿಸಿದ್ದಾರೆ.

ಸರ್ಕಾರದ ನಿಜವಾದ ಮುಖ ಈಗ ಕಾಣಿಸುತ್ತಿದೆ. ಸರ್ಕಾರ ಸಂವಿಧಾನಕ್ಕೆ ವಿರೋಧವಾಗಿ ಕೆಲಸ ಮಾಡುತ್ತಿದ್ದು, ದಬ್ಬಾಳಿಕೆ ವಿರುದ್ಧ ನಾವು ಜತೆಯಾಗಿ ನಿಲ್ಲಬೇಕು ಎಂದಿದ್ದಾರೆ ನೀರಜ್.

ಎಬಿವಿಪಿ ಗೂಂಡಾಗಳು ನಡೆಸಿದ ಹಲ್ಲೆಯನ್ನು ನಾವು ಖಂಡಿಸುತ್ತೇವೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಅಮಾಯಕ ವಿದ್ಯಾರ್ಥಿಗಳ ಮೇಲೆ ಗಂಭೀರ ಹಲ್ಲೆ ನಡೆಯುವಾಗಲೂ ಬಿಜೆಪಿ ಸುಮ್ಮನಿರುತ್ತದೆ. ಅವರು ಭಾರತವನ್ನು ಯುದ್ಧಭೂಮಿಯನ್ನಾಗಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಟ್ವೀಟಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು