ಕೋವಿಡ್–19: ದುಬೈ, ಬಹರೇನ್‌ನಿಂದ ತಾಯ್ನಾಡಿಗೆ ಮರಳಿದ 541 ಭಾರತೀಯರು

ಚೆನ್ನೈ: ಬಹರೇನ್ ಮತ್ತು ದುಬೈನಿಂದ ಏರ್ ಇಂಡಿಯಾದ ಮೂರು ವಿಶೇಷ ವಿಮಾನಗಳು ಶನಿವಾರ ಬೆಳಗ್ಗೆ 541 ಭಾರತೀಯರನ್ನು ಕರೆತಂದವು ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದುಬೈನಿಂದ ಎರಡು ವಿಶೇಷ ವಿಮಾನಗಳ ಮೂಲಕ 359 ಭಾರತೀಯರು ಚೆನ್ನೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದಾರೆ. ಮೊದಲ ವಿಮಾನದಲ್ಲಿ 177 ಹಾಗೂ ಎರಡನೇ ವಿಮಾನದಲ್ಲಿ ಮೂವರು ಮಕ್ಕಳು ಸೇರಿದಂತೆ 182 ಜನರು ಬಂದಿದ್ದಾರೆ.
Tamil Nadu: Another special flight from United Arab Emirates (UAE)'s Dubai, carrying around 177 Indian nationals, has arrived at Chennai International Airport. #VandeBharatMission https://t.co/E94ORsRakb
— ANI (@ANI) May 8, 2020
ಇದನ್ನೂ ಓದಿ: ಸಿಂಗಪುರದಿಂದ 234 ಮಂದಿ ಭಾರತೀಯರನ್ನು ಕರೆತಂದ ಏರ್ ಇಂಡಿಯಾ
ಬಹರೇನ್‌ನಿಂದ ಕೊಚ್ಚಿಗೆ ಆಗಮಿಸಿದ ವಿಶೇಷ ವಿಮಾನದಲ್ಲಿ 182 ಭಾರತೀಯರು ತವರಿಗೆ ಮರಳಿದ್ದಾರೆ.
Air India flight with 182 Indians from Bahrain arrive at Cochin International Airport
Read @ANI Story | https://t.co/33LvSR8uPb pic.twitter.com/Kx5y3J8zgO
— ANI Digital (@ani_digital) May 8, 2020
ವಿದೇಶಗಳಿಂದ ಬಂದ ಎಲ್ಲಾ ಪ್ರಯಾಣಿಕರನ್ನು ಸ್ಕ್ರೀನ್ ಟೆಸ್ಟ್‌ಗೆ ಒಳಪಡಿಸಲಾಗಿದೆ ಎಂದು ವಿಮಾನಯಾನ ಹಾಗೂ ಸ್ಥಳೀಯ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.
ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಹಂತಹಂತವಾಗಿ ವಾಪಸ್ ಕರೆಸಿಕೊಳ್ಳುವ ವಂದೇ ಭಾರತ್ ಮಿಷನ್ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಇದರ ಭಾಗವಾಗಿ, ಲಾಕ್‌ಡೌನ್‌ನಿಂದಾಗಿ ವಿದೇಶದಲ್ಲಿ ಸಿಲುಕಿರುವ ಸುಮಾರು 15 ಸಾವಿರ ಭಾರತೀಯ ಪ್ರಜೆಗಳನ್ನು ಮರಳಿ ತಾಯ್ನಾಡಿಗೆ ಕರೆತರಲು ಮೇ 13ರವರೆಗೆ ಏರ್ ಇಂಡಿಯಾದ 64 ವಿಮಾನಗಳು ಕಾರ್ಯನಿರ್ವಹಿಸಲಿವೆ ಎಂದೂ ಸರ್ಕಾರ ಹೇಳಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.