ಅಯೋಧ್ಯೆ ವಿವಾದ: ತುರ್ತು ಸಭೆ ಕರೆದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

ಗುರುವಾರ , ಏಪ್ರಿಲ್ 25, 2019
26 °C

ಅಯೋಧ್ಯೆ ವಿವಾದ: ತುರ್ತು ಸಭೆ ಕರೆದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

Published:
Updated:

ಲಖನೌ: ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು(ಎಐಎಂಪಿಎಲ್‌ಬಿ) ತನ್ನ ಕಾರ್ಯಕಾರಿಣಿ ಸಮಿತಿಯ ತುರ್ತು ಸಭೆ ಕರೆದಿದೆ.

ಸಮಿತಿಯಲ್ಲಿರುವ ಎಲ್ಲ 51 ಸದಸ್ಯರೂ ಇಂದು(ಭಾನುವಾರ) ನಡೆಯಲಿರುವ ಸಭೆಗೆ ಹಾಜರಾಗುವ ನಿರೀಕ್ಷೆಯಿದೆ. ಸುನ್ನೀ ವಕ್ಫ್‌ ಮಂಡಳಿ ಪ್ರತಿನಿಧಿಗಳೂ ಆಗಮಿಸಲಿದ್ದಾರೆ ಎನ್ನಲಾಗಿದೆ.

ರಾಜಕೀಯವಾಗಿ ಭಾರಿ ಮಹತ್ವ ಪಡೆದುಕೊಂಡಿರುವ ಈ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳುವಂತೆ ಸುಪ್ರಿಂಕೋರ್ಟ್‌ ಸಂದಾನ ಸಮಿತಿಯನ್ನು ರಚಿಸಿತ್ತು. ಮಾರ್ಚ್‌ 13ರಂದು ನಡೆದ ಮೊದಲ ಸಭೆಯಲ್ಲಿ ಎಲ್ಲ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿ ಚರ್ಚೆ ನಡೆಸಿದ್ದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ಎಫ್‌.ಎಂ. ಇಬ್ರಾಹಿಂ ಕಲೀಫುಲ್ಲಾ ಸಭೆಯ ಯಾವುದೇ ವಿಚಾರವನ್ನು ವರದಿ ಮಾಡದಂತೆ ಮಾಧ್ಯಮಗಳಿಗೆ ಸೂಚಿಸಿದ್ದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 2

  Frustrated
 • 3

  Angry

Comments:

0 comments

Write the first review for this !