ಭಾನುವಾರ, ಜನವರಿ 26, 2020
31 °C
ನನಕಾನಾ ಸಾಹಿಬ್‌ ಗುರುದ್ವಾರದ ಮೇಲಿನ ದಾಳಿಗೆ ಖಂಡನೆ

ಧರ್ಮಾಂಧತೆ ಅಪಾಯಕಾರಿ, ಪ್ರೀತಿಯೊಂದೇ ಅದಕ್ಕೆ ಪ್ರತಿಮದ್ದು: ರಾಹುಲ್ ಗಾಂಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಪಾಕಿಸ್ತಾನದ ನನಕಾನಾ ಸಾಹಿಬ್‌ ಗುರುದ್ವಾರದ ಮೇಲೆ ಶುಕ್ರವಾರ ನಡೆದ ದಾಳಿಯನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದು, ಧರ್ಮಾಂಧತೆಯು ಅಪಾಯಕಾರಿ ಮತ್ತು ಪ್ರೀತಿಯೊಂದೇ ಅದಕ್ಕೆ ಪ್ರತಿಮದ್ದು ಎಂದು ಹೇಳಿದ್ದಾರೆ. 

ಕೇಂದ್ರ ಸಚಿವೆ ಹರ್ಸಿಮ್ರತ್ ಬಾದಲ್ ಅವರು ಟ್ವೀಟ್ ಮಾಡಿ, ಗುರುದ್ವಾರದ ಮೇಲೆ ನಡೆದ ಕಲ್ಲು ತೂರಾಟವನ್ನು ಖಂಡಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿರಾಕರಿಸಿದ್ದಾರೆ. ಇದು ಪವಿತ್ರ ಮಂದಿರದ ಅಸ್ತಿತ್ವಕ್ಕೆ ಬೆದರಿಕೆಯೊಡ್ಡಿರುವುದನ್ನು ಖಂಡಿಸದ ಅವರ ಸಿಖ್ ವಿರೋಧಿ ನಡೆಯನ್ನು ಬಹಿರಂಗಪಡಿಸಿದೆ. ರಾಹುಲ್ ಗಾಂಧಿ ಅವರು ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಜನರನ್ನು ತಪ್ಪುದಾರಿಗೆಳೆಯುವಲ್ಲಿ ಬ್ಯುಸಿಯಾಗಿದ್ದಾರೆ ಆದರೆ ಪಾಕ್‌ನಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಕುರಿತು ಮಾತನಾಡಲು ಸಮಯವಿಲ್ಲ ಎಂದು ದೂರಿದ್ದರು. 

ಇದಾದ ಕೆಲವೇ ಗಂಟೆಗಳಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ನನಕಾನಾ ಸಾಹಿಬ್‌ ಮೇಲೆ ನಡೆದ ದಾಳಿ ಖಂಡನೀಯ ಮತ್ತು ನಿಸ್ಸಂಶಯವಾಗಿ ಖಂಡಿಸಬೇಕು. ಧರ್ಮಾಂಧತೆಯು ಅಪಾಯಕಾರಿ, ಅತ್ಯಂತ ಹಳೆಯ ವಿಷವು ಗಡಿಯನ್ನು ತಿಳಿದಿರುವುದಿಲ್ಲ. ಪ್ರೀತಿ, ಪರಸ್ಪರ ಗೌರವ ಮತ್ತು ತಿಳಿವಳಿಕೆ ಮಾತ್ರ ಅವರ ವಿರುದ್ಧದ ಪ್ರತಿಮದ್ದಾಗಿದೆ ಎಂದು ಅವರು ಹೇಳಿದ್ದಾರೆ.

ಶುಕ್ರವಾರವಷ್ಟೇ ಸಿಖ್‌ ಧರ್ಮ ಸ್ಥಾಪಕ ಗುರುನಾನಕ್ ದೇವ್‌ ಅವರ ಜನ್ಮಸ್ಥಳ ನನಕಾನಾ ಸಾಹಿಬ್‌ ಗುರುದ್ವಾರವನ್ನು ಸುತ್ತುವರಿದಿದ್ದ ನೂರಕ್ಕೂ ಹೆಚ್ಚು ಜನರಿದ್ದ ಗುಂಪೊಂದು, ಸಿಖ್ಖರ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.

ಇದನ್ನೂ ಓದಿ:  ಪಾಕ್‌ನ ನನಕಾನಾ ಸಾಹಿಬ್‌ ಗುರುದ್ವಾರದ ಮೇಲೆ ದಾಳಿ: ಸಿಖ್ಖರ ರಕ್ಷಣೆಗೆ ಆಗ್ರಹ

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು, ಗುರುದ್ವಾರದಲ್ಲಿ ಸಿಲುಕಿರುವ ಏಸಿಖ್ಖರ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು