ಶುಕ್ರವಾರ, ಜನವರಿ 24, 2020
22 °C

ಪೌರತ್ವ ಮಸೂದೆಗೆ ವಿರೋಧ: ಅಸ್ಸಾಂನಲ್ಲಿ ಬಿಜೆಪಿ ಶಾಸಕ ಹಜಾರಿಕಾ ಮನೆಗೆ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

CAB Protest

ಗುವಾಹಟಿ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು ಅಸ್ಸಾಂನ ಚಬುವಾದಲ್ಲಿ ಬಿಜೆಪಿ ಶಾಸಕ ಬಿನೋದ್ ಹಜಾರಿಕಾ ಅವರ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ .

ಇಲ್ಲಿನ ವೃತ್ತನಿರೀಕ್ಷಕರ ಕಚೇರಿಗೂ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಹಚ್ಚಿದ್ದು ವಾಹನಗಳಿಗೆ ಹಾನಿಯುಂಟು ಮಾಡಿದ್ದಾರೆ.

ಇದನ್ನೂ ಓದಿ: ಅಸ್ಸಾಂ, ತ್ರಿಪುರಾದಲ್ಲಿ ಸೇನಾಪಡೆ ನಿಯೋಜನೆ, ಗುವಾಹಟಿಯಲ್ಲಿ ಕರ್ಫ್ಯೂ

ಶಾಂತಿ ಕಾಪಾಡುವಂತೆ ಮುಖ್ಯಮಂತ್ರಿ ಸೊನೊವಾಲ್ ಮನವಿ
ಅಸ್ಸಾಂನ ಜನರು ಶಾಂತಿ ಕಾಪಾಡಬೇಕು. ಇದು ನಮ್ಮ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆಧ್ಯಾತ್ಮಿತ ಸಂಪ್ರದಾಯ. ಅಸ್ಸಾಂನ ಜನರು ಶಾಂತಿ ಕಾಪಾಡುತ್ತಾರೆ ಎಂಬ ಬಲವಾದ ನಂಬಿಕೆ ನನಗೆ ಇದೆ ಎಂದು ಅಸ್ಸಾಂ ಮುಖ್ಯಮಂತ್ರಿ  ಸರ್ಬಾನಂದ  ಸೊನೊವಾಲ್ ಹೇಳಿದ್ದಾರೆ. 

 ಡಿಸೆಂಬರ್ 19ರಂದು ಪ್ರತಿಭಟನೆಗೆ  ಕರೆ ನೀಡಿದ ಎಡಪಕ್ಷ
 ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಡಿಸೆಂಬರ್ 19ರಂದು ದೇಶದಾದ್ಯಂತ ಪ್ರತಿಭಟನೆ ನಡೆಸಲು  ಎಡಪಕ್ಷಗಳು ಕರೆ ನೀಡಿವೆ.

ಇದನ್ನೂ ಓದಿ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿ ಪ್ರತಿಭಟನೆ: ಅಸ್ಸಾಂನಲ್ಲಿ ಇಂಟರ್ ನೆಟ್ ಸ್ಥಗಿತ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು