ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ವಿರುದ್ದ ಪ್ರತಿಭಟನೆ: ದೇಶ ತೊರೆಯಲು ಬಾಂಗ್ಲಾ ಮೂಲದ ವಿದ್ಯಾರ್ಥಿನಿಗೆ ಸೂಚನೆ

Last Updated 28 ಫೆಬ್ರುವರಿ 2020, 12:48 IST
ಅಕ್ಷರ ಗಾತ್ರ

ಕೋಲ್ಕತ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಇಲ್ಲಿನ ವಿಶ್ವ ಭಾರತಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಬಾಂಗ್ಲಾ ಮೂಲದವಿದ್ಯಾರ್ಥಿನಿಯನ್ನು ದೇಶ ತೊರೆಯುವಂತೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ.

ಕೋಲ್ಕತದ ವಿಶ್ವ ಭಾರತಿ ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ20 ವರ್ಷದ ಅಫ್ಸರಾ ಅನಿಕ್‌ ಮೀಮ್‌ ಎಂಬ ವಿದ್ಯಾರ್ಥಿನಿಯು ಸಿಎಎ ವಿರುದ್ಧ ನಡೆದಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಳು. ಆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಿಂದ ವಿವಿಗೆ ಪತ್ರ ಬಂದಿದೆ.

ವಿದ್ಯಾರ್ಥಿನಿಯು ಫೆಬ್ರವರಿ 29ರ ಒಳಗಾಗಿ ಭಾರತವನ್ನು ತೊರೆಯುವಂತೆ ಪತ್ರದಲ್ಲಿ ಸೂಚಿಸಲಾಗಿದೆ.

ಡಿಸೆಂಬರ್‌ನಲ್ಲಿ ಶಾಂತಿನಿಕೇತನದಲ್ಲಿ ಸಿಎಎ ವಿರುದ್ಧ ನಡೆದಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಫ್ಸರಾ ಕೆಲ ಫೋಟೊಗಳನ್ನು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಳು. ಆ ನಂತರ ‘ಬಾಂಗ್ಲಾದೇಶಿ ಟೆರರಿಸ್ಟ್‘ ಎಂಬ ಶೀರ್ಷಿಕೆಯಡಿ ಅವಳನ್ನು ಟ್ರೋಲ್‌ ಮಾಡಲಾಗಿತ್ತು.

ವಿದ್ಯಾರ್ಥಿನಿ ಮೇಲಿನ ಕ್ರಮವನ್ನು ಸಿಪಿಎಂ ಪಕ್ಷ ತೀವ್ರವಾಗಿ ಖಂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT