ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತ್‌ ಶಾಗೆ ಗೃಹ, ನಿರ್ಮಲಾಗೆ ಹಣಕಾಸು: ಮೋದಿ ಸರ್ಕಾರ್ 2.0 ಖಾತೆ ಹಂಚಿಕೆ ವಿವರ

Last Updated 31 ಮೇ 2019, 8:09 IST
ಅಕ್ಷರ ಗಾತ್ರ

ನವದೆಹಲಿ: ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಖಾತೆ ಹಂಚಿಕೆ ಮಾಡಿದ್ದಾರೆ. ನಿರೀಕ್ಷೆಯಂತೆ ಅಮಿತ್‌ ಶಾಗೆ ಗೃಹ ಖಾತೆ ಸಿಕ್ಕಿದೆ. ಕಳೆದ ಬಾರಿ ಗೃಹ ಇಲಾಖೆ ನಿರ್ವಹಿಸಿದ್ದ ರಾಜನಾಥ್ ಸಿಂಗ್ ರಕ್ಷಣಾ ಇಲಾಖೆ ಮತ್ತುಕಳೆದ ಬಾರಿ ರಕ್ಷಣೆಯ ಜವಾಬ್ದಾರಿ ಹೊತ್ತಿದ್ದ ನಿರ್ಮಲಾ ಸೀತಾರಾಮನ್ ಈ ಬಾರಿ ಹಣಕಾಸು ಇಲಾಖೆಯ ಹೊಣೆ ಹೊತ್ತಿದ್ದಾರೆ.

ರಾಜ್ಯದಿಂದ ಆಯ್ಕೆಯಾಗಿರುವ ಸಂಸದರಾದ ಡಿ.ವಿ.ಸದಾನಂದಗೌಡ (ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ) ಮತ್ತು ಪ್ರಹ್ಲಾದ ಜೋಶಿ (ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ) ಅವರಿಗೆ ಮಾತ್ರ ಸಂಪುಟ ದರ್ಜೆಯ ಖಾತೆಗಳು ಸಿಕ್ಕಿವೆ. ಸುರೇಶ್ ಅಂಗಡಿ ಅವರಿಗೆ ರೈಲ್ವೆ ಇಲಾಖೆಯ ರಾಜ್ಯ ಸಚಿವ ಸ್ಥಾನಮಾನ (ಸ್ವತಂತ್ರ ನಿರ್ವಹಣೆ)ಸಿಕ್ಕಿದೆ.

ನರೇಂದ್ರ ಮೋದಿ– ಪ್ರಧಾನಿ, ಸಾರ್ವಜನಿಕ ಕುಂದುಕೊರತೆ–ಪಿಂಚಣಿ ಖಾತೆ, ಅಣುಶಕ್ತಿ, ಬಾಹ್ಯಾಕಾಶ, ನೀತಿ ನಿರೂಪಣೆ ಸೇರಿದಂತೆ ಹಂಚಿಕೆಯಾಗದ ಎಲ್ಲ ಖಾತೆಗಳು.

ರಾಜನಾಥ್ ಸಿಂಗ್– ರಕ್ಷಣಾ ಇಲಾಖೆ, ಅಮಿತ್‌ ಶಾ–ಗೃಹ ಇಲಾಖೆ, ನಿತಿನ್ ಗಡ್ಕರಿ– ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ, ಅತಿಸಣ್ಣ, ಸಣ್ಣ ಮತ್ತುಮಧ್ಯಮ ಕೈಗಾರಿಕೆಗಳು. ಡಿ.ವಿ.ಸದಾನಂದಗೌಡ– ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ, ನಿರ್ಮಲಾ ಸೀತಾರಾಮನ್– ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರ, ರಾಮ್‌ ವಿಲಾಸ್ ಪಾಸ್ವಾನ್–ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ.

ನರೇಂದ್ರ ಸಿಂಗ್ ತೋಮಾರ್– ಕೃಷಿ ಮತ್ತು ರೈತರ ಅಭ್ಯುದಯ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್, ರವಿಶಂಕರ್ ಪ್ರಸಾದ್–ಕಾನೂನು ಇಲಾಖೆ, ಸಂವಹನ, ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ, ಹರ್‌ಸಿಮ್ರತ್ ಕೌರ್ ಬಾದಲ್–ಆಹಾರ ಸಂಸ್ಕರಣೆ, ಥಾವರ್ ಚಾಂದ್ ಗೆಹ್ಲೋಟ್–ಸಾಮಾಜಿಕ ನ್ಯಾಯ, ಡಾ.ಸುಬ್ರಹ್ಮಣ್ಯಂ ಜೈಶಂಕರ್– ವಿದೇಶಾಂಗ ವ್ಯವಹಾರ, ರಮೇಶ್ ಪೋಖ್ರಿಯಾಲ್ ನಿಶಾಂಕ್– ಮಾನವ ಸಂಪನ್ಮೂಲ, ಅರ್ಜುನ್ ಮುಂಡಾ– ಬುಡಕಟ್ಟು ವ್ಯವಹಾರ, ಸ್ಮೃತಿ ಇರಾನಿ– ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಜವಳಿ.

ಡಾ.ಹರ್ಷವರ್ಧನ್– ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ, ಭೂವಿಜ್ಞಾನ. ಪ್ರಕಾಶ್ ಜಾವಡೇಕರ್– ಪರಿಸರ, ಅರಣ್ಯ, ಹವಾಮಾನ ಬದಲಾವಣೆ. ಮಾಹಿತಿ ಮತ್ತು ಪ್ರಸಾರ ಇಲಾಖೆ. ಪೀಯೂಷ್ ಗೋಯಲ್– ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕೆ, ಧರ್ಮೇಂದ್ರ ಪ್ರಧಾನ್– ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಉಕ್ಕು. ಮುಕ್ತಾರ್ ಅಬ್ಬಾಸ್ ನಖ್ವಿ– ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪ್ರಹ್ಲಾದ್ ಜೋಶಿ– ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ, ಮಹೇಂದ್ರ ನಾಥ್ ಪಾಂಡೆ– ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT