ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಗಡಿ ಸಂಘರ್ಷ | ಹುತಾತ್ಮ ಕರ್ನಲ್ ಸಂತೋಷ್ ಬಾಬು

ತೆಲಂಗಾಣ ಮೂಲದ ಸೇನಾಧಿಕಾರಿ
ಅಕ್ಷರ ಗಾತ್ರ

ಹೈದರಾಬಾದ್: ಚೀನಾ ಪಡೆಗಳೊಂದಿಗೆ ಸೋಮವಾರ ರಾತ್ರಿ ಲಡಾಖ್‌ನ ಪೂರ್ವಭಾಗದ ಗಲ್ವಾನ್‌ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ತೆಲಂಗಾಣದ ಸೂರ್ಯಪೇಟೆಯ ಕರ್ನಲ್ ಸಂತೋಷ್ ಬಾಬು ಹುತಾತ್ಮರಾಗಿದ್ದಾರೆ.

ಕರ್ನಲ್ ಸಂತೋಷ್ ಬಾಬು ಮತ್ತು ಇನ್ನಿಬ್ಬರು ಯೋಧರು ಹುತಾತ್ಮರಾಗಿರುವುದಾಗಿ ರಕ್ಷಣಾ ಮೂಲಗಳನ್ನು ಉಲ್ಲೇಖಿಸಿ 'ತೆಲಂಗಾಣ ಟುಡೆ' ಸೇರಿದಂತೆ ಹಲವು ನ್ಯೂಸ್‌ ಪೋರ್ಟಲ್‌ಗಳು ವರದಿ ಮಾಡಿವೆ.

ಸಂತೋಷ್ ಬಾಬು 18 ತಿಂಗಳುಗಳಿಂದ ಅಂತರರಾಷ್ಟ್ರೀಯ ಗಡಿಯಲ್ಲಿ ಕರ್ತವ್ಯನಿರತರಾಗಿದ್ದರು. ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಸೂರ್ಯಪೇಟೆ ಪಟ್ಟಣದ ವಿದ್ಯಾನಗರದ ನಿವಾಸಿ ಸಂತೋಷ್ ಬಾಬು ಅವರ ತಂದೆ ದೈಹಿಕ ಶಿಕ್ಷಣ ಶಿಕ್ಷಕರು.ಹೈದರಾಬಾದ್‌ನ ಕೊರುಕೊಂಡ ಸೈನಿಕ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದ ಅವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ವಿದ್ಯಾರ್ಥಿಯಾಗಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT