ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪರೇಷನ್ ಕಮಲ: ಸರ್ಕಾರ ಉರುಳಿಸಲು ಮೋದಿ, ಶಾ, ಬಿಎಸ್‌ವೈ ತಂತ್ರ: ಕಾಂಗ್ರೆಸ್ ಆರೋಪ

Last Updated 9 ಫೆಬ್ರುವರಿ 2019, 5:39 IST
ಅಕ್ಷರ ಗಾತ್ರ

ನವದೆಹಲಿ:ಕರ್ನಾಟಕದಲ್ಲಿ ಆಡಳಿತದಲ್ಲಿರುವ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಆಪರೇಷನ್‌ ಕಮಲ ತಂತ್ರವನ್ನು ಹೆಣೆಯಲಾಗಿದ್ದು, ಇದರ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹಾಗೂ ಬಿ.ಎಸ್‌.ಯಡಿಯೂರಪ್ಪ ಅವರ ಕೈವಾಡ ಇದೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸಿದ್ದಾರೆ.

ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಅವರ ಪುತ್ರ ಶರಣ್ ಗೌಡ ಅವರಿಗೆ ಆಮಿಷ ಒಡ್ಡಿದರೆನ್ನಲಾದ ಆಡಿಯೋವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಬಿಡುಗಡೆ ಮಾಡಿದ್ದರು.

ಈ ಆಡಿಯೋ ಸಂಬಂಧ ಪ್ರತಿಕಾಗೋಷ್ಟಿ ನಡೆಸಿದ ಕಾಂಗ್ರೆಸ್‌ ನಾಯಕರು,ಚುನಾವಣೆಗಳಿಗಾಗಿ ಸಾಕಷ್ಟು ಹಣ ಖರ್ಚು ಮಾಡುವ ಬಿಜೆಪಿಶಾಸಕರಿಗೆ, ಸ್ಪೀಕರ್‌ಗೆ ಕೋಟಿ ಕೋಟಿ ಹಣದ ಆಮಿಷ ಒಡ್ಡಿದೆ. ಸಂವಿಧಾನಬದ್ಧ ಸರ್ಕಾರವನ್ನು ಉರುಳಿಸಲು ಮೂವರೂ ಪ್ರಯತ್ನಿಸುತ್ತಿದ್ದಾರೆಎಂದು ಹರಿಹಾಯ್ದರು.

ಮುಂದಿನ ಚುನಾವಣೆ ಖರ್ಚಿಗಾಗಿ ಪ್ರತಿಯೊಬ್ಬಶಾಸಕರಿಗೆ ₹ 10 ಕೋಟಿ ಹಣ ನೀಡುವುದಾಗಿ ಆಮಿಷ ಒಡ್ಡಲಾಗಿದೆ ಎಂದು ಆರೋಪಿಸಿದ ಎಐಸಿಸಿ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೆವಾಲಾ, ಇದುವರೆಗೆ ಸುಮಾರು ₹ 450 ಕೋಟಿಗೂ ಹೆಚ್ಚು ಹಣದ ಆಮಿಷ ನೀಡಲಾಗಿದೆ.ಇಷ್ಟು ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT