ಶುಕ್ರವಾರ, ಜೂನ್ 5, 2020
27 °C

ಬೆಂಗಳೂರಿನ ರಮಾಡ ಹೋಟೆಲ್ ಬಳಿ ಧರಣಿ ಕುಳಿತ ದಿಗ್ವಿಜಯ ಸಿಂಗ್ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Digvijaya Singh

ಬೆಂಗಳೂರು: ಬೆಂಗಳೂರಿನ ರಮಾಡ ಹೋಟೆಲ್ ಬಳಿ ಧರಣಿ ಕುಳಿತಿದ್ದ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಈ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದು ಅವರನ್ನು ಭೇಟಿ ಮಾಡಲು ಪೊಲೀಸರು ಅನುಮತಿ ನೀಡದ ಕಾರಣ ದಿಗ್ವಿಜಯ ಸಿಂಗ್  ಬುಧವಾರ ಬೆಳಗ್ಗೆ ಧರಣಿ ಕುಳಿತಿದ್ದರು.  

ಮುಂಜಾನೆ ಬೆಂಗಳೂರಿಗೆ ಬಂದ ಸಿಂಗ್‌ನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ  ಡಿ.ಕೆ.ಶಿವಕುಮಾರ್ ಬರ ಮಾಡಿಕೊಂಡಿದ್ದರು.

 ಮಧ್ಯಪ್ರದೇಶದ 21  ಶಾಸಕರು ರಮಾಡ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.
 ವಿಶ್ವಾಸಮತ ಸಾಬೀತುಪಡಿಸುವಂತೆ ಕಮಲ್‌ನಾಥ್‌ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ  ಬಿಜೆಪಿ ಹಿರಿಯ ಮುಖಂಡ ಶಿವರಾಜ್‌ ಸಿಂಗ್‌ ಚೌಹಾಣ್‌ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. 

ಇದನ್ನೂ ಓದಿ: ಮಧ್ಯಪ್ರದೇಶ: ಸರ್ಕಾರ ಉಳಿಸಿಕೊಳ್ಳಲು ‘ಒತ್ತಡ, ಆಮಿಷ’ ತಂತ್ರ

ರಮಾಡ ಹೋಟೆಲ್ ಬಳಿ ಧರಣಿ ಕುಳಿತಿದ್ದ ದಿಗ್ವಿಜಯ ಸಿಂಗ್ ಅವರನ್ನು ಪೊಲೀಸರು  ಬಂಧಿಸಿ ಅಮೃತಹಳ್ಳಿ ಪೊಲೀಸ್  ಠಾಣೆಗೆ ಕರೆದೊಯ್ದಿದ್ದಾರೆ. ಇದೀಗ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸಿಂಗ್ ಹೇಳಿದ್ದಾರೆ.

ಬಿಜೆಪಿ ಶಾಸಕ ಅರವಿಂದ ಭದೋರಿಯಾ ಮತ್ತು ಸಂಸದರೊಬ್ಬರನ್ನು ಹಿಡಿದಿರಿಸಲಾಗಿದೆ. ನಾನು ನನ್ನ ಶಾಸಕರನ್ನು, ರಾಜ್ಯಸಭೆಯ ಮತದಾರರೂ ಆದ, ನನ್ನ ಪಕ್ಷದ ಜನರನ್ನು ಯಾಕೆ ಭೇಟಿ ಮಾಡಲು ಬಿಡುವುದಿಲ್ಲ. ನಮ್ಮ ಮಧ್ಯೆ ಬಿಜೆಪಿ ಏನು ಮಾಡುತ್ತಿದೆ ಎಂದು ದಿಗ್ವಿಜಯ ಸಿಂಗ್ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು