ಶನಿವಾರ, ಏಪ್ರಿಲ್ 4, 2020
19 °C
ಇರಾನ್‌, ಸ್ಪೇನ್‌ನಲ್ಲಿ ಸಾವು ಏರಿಕೆ

ಚೀನಾದಲ್ಲಿ ಕುಗ್ಗಿದ ಕೊರೊನಾ ಪರಿಣಾಮ: ಜಾಗತಿಕವಾಗಿ 9020ಕ್ಕೇರಿದ ಮೃತರ ಸಂಖ್ಯೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್‌: ಕೊರೊನಾ ಸೋಂಕು ಜಾಗತಿಕವಾಗಿ ದಿನೇ ದಿನೇ ತೀವ್ರಗತಿಯಲ್ಲಿ ವ್ಯಾಪಿಸುತ್ತಿದೆ. ಸೋಂಕು ಪೀಡಿತರ ಸಂಖ್ಯೆ 90,293ಕ್ಕೆ ಏರಿದ್ದು, ಮೃತರ ಸಂಖ್ಯೆ 9,020ಕ್ಕೆ ತಲುಪಿದೆ.

ಐರೋಪ್ಯ ರಾಷ್ಟ್ರಗಳಲ್ಲಿ ಅತ್ಯಧಿಕ ಅಂದರೆ 4,134 ಜನರು ಸತ್ತಿದ್ದರೆ, ಏಷ್ಯಾದ ರಾಷ್ಟ್ರಗಳಲ್ಲಿ 3,416 ಜನರು ಸತ್ತಿದ್ದಾರೆ. ಒಟ್ಟಾರೆ ಗರಿಷ್ಠ ಪ್ರಕರಣಗಳು ಚೀನಾದಲ್ಲಿ ಸಂಭವಿಸಿವೆ. 

ರಷ್ಯಾದಲ್ಲಿ ಕೋವಿಡ್‌-19 ಮೊದಲ ಬಲಿ ಪಡೆದಿದೆ. ಸೋಂಕು ದೃಢಪಟ್ಟಿದ್ದ 79 ವರ್ಷದ ವೃದ್ಧೆ ಗುರುವಾರ ಸತ್ತಿದ್ದಾರೆ. ಇವರಿಗೆ ನ್ಯುಮೋನಿಯಾ ಕೂಡಾ ಇತ್ತು ವೈದ್ಯರು ತಿಳಿಸಿದ್ದಾರೆ.

ಕೈದಿಗಳಿಗೆ ಕ್ಷಮಾದಾನ: ಇರಾನ್‌ನಲ್ಲಿ ಮತ್ತೆ 149 ಜನರು ಸತ್ತಿದ್ದು, ಮೃತರ ಸಂಖ್ಯೆ 1,284ಕ್ಕೆ ಏರಿದೆ. 18,407 ಮಂದಿಗೆ ಸೋಂಕು ತಗುಲಿದೆ ಎಂದು ಇರಾನ್‌ನ ಉಪ ಆರೋಗ್ಯ ಸಚಿವ ಅಲಿಜೆರಾ ರೈಸಿ ಹೇಳಿದರು.

ಸೋಂಕು ವ್ಯಾಪಿಸುವುದನ್ನು ತಡೆಯುವ ಕ್ರಮವಾಗಿ 10,000ಕ್ಕೂ ಹೆಚ್ಚು ಕೈದಿಗಳಿಗೆ ಕ್ಷಮಾದಾನ ನೀಡಲು ಇರಾನ್‌ನ ಉನ್ನತ ನಾಯಕರು ನಿರ್ಧರಿಸಿದ್ದಾರೆ ಎಂದು ಸರ್ಕಾರದ ಅಧಿಕೃತ ಟಿ.ವಿ ವರದಿ ಮಾಡಿದೆ.

ಸ್ಪೇನ್‌, ಸಾವಿನ ಸಂಖ್ಯೆ 767ಕ್ಕೆ ಏರಿಕೆ: ಕೊರೊನಾ ಸೋಂಕಿನಿಂದ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 767ಕ್ಕೆ ಏರಿದೆ ಎಂದು ಸ್ಪೇನ್‌ ಗುರುವಾರ ಪ್ರಕಟಿಸಿದೆ. ಸೋಂಕು ಪೀಡಿತರ ಸಂಖ್ಯೆಯು ಒಟ್ಟಾರೆ 17,147ಕ್ಕೆ ಏರಿದೆ ಎಂದು ಮಾಹಿತಿ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು