ಬುಧವಾರ, ಜುಲೈ 15, 2020
27 °C
ಜನಶಕ್ತಿ ಸಂಘಟನೆಯ ಸಮೀಕ್ಷಾ ವರದಿ

ಕೊರೊನಾ ಬಿಕ್ಕಟ್ಟು | ಶ್ರಮಿಕ ವರ್ಗಕ್ಕೆ ಪೆಟ್ಟು, ಬಡವಾಗಿದೆ ಬಡವರ ಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಪಸರಿಸುವಿಕೆ ತಡೆಗಾಗಿ ಹೇರಲಾಗಿರುವ ಲಾಕ್‌ಡೌನ್ ರಾಜ್ಯದ ಬಡವರು, ಕೂಲಿ ಕಾರ್ಮಿರು, ರೈತರು ಸೇರಿದಂತೆ ಎಲ್ಲ ಶ್ರಮಿಕ ವರ್ಗವನ್ನು ಇನ್ನಿಲ್ಲದ ಕಷ್ಟಕ್ಕೆ ತಳ್ಳಿದೆ. ದಿನನಿತ್ಯದ ಆಹಾರ, ಔಷಧ, ಸರ್ಕಾರಿ ಸವಲತ್ತುಗಳು ಸಿಗದೆ ಈ ವರ್ಗ ಪರಿತಪಿಸುತ್ತಿದೆ.

ಕರ್ನಾಟಕ ಜನಶಕ್ತಿ ಸಂಘಟನೆಯ ಸಾಮಾಜಿಕ ಅಧ್ಯಯನ ಸಮಿತಿಯು ರಾಜ್ಯದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಜನರು ತಮ್ಮ ನಿತ್ಯದ ಪಡಿಪಾಟಲನ್ನು ಬಿಚ್ಚಿಟ್ಟಿದ್ದಾರೆ. ಈ ಸಮುದಾಯಗಳಿಗೆ ಆಹಾರ–ಆರೋಗ್ಯ–ಆದಾಯದ ಭದ್ರತೆ ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದು ಸಮಿತಿ ನೆನಪಿಸಿದೆ.

*** 

ಹೀಗಿತ್ತು ಸಮೀಕ್ಷೆ

*ಬೆಂಗಳೂರು ಸೇರಿ 15 ಜಿಲ್ಲೆಗಳಲ್ಲಿ ಸಮೀಕ್ಷೆ 

*ಏ.22ರಿಂದ 28ರ ಅವಧಿಯಲ್ಲಿ ಅಧ್ಯಯನ

*ಜೀವನೋಪಾಯ, ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲಾಗಿತ್ತು

*ರೈತರು, ರೈತ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ದೇವದಾಸಿಯರು, ಗುತ್ತಿಗೆ ಕಾರ್ಮಿಕರು, ನಿವೃತ್ತ ಸರ್ಕಾರಿ ನೌಕರರು, ಅಸಂಘಟಿತ ವಲಯದ ಕಾರ್ಮಿಕರು ಸೇರಿದಂತೆ ಹಲವು ಸಮುದಾಯಗಳು ಸಮೀಕ್ಷೆಯಲ್ಲಿ ಭಾಗಿ

ಸರ್ಕಾರಕ್ಕೆ ಅಧ್ಯಯನ ತಂಡದ ಶಿಫಾರಸು

*ಎಲ್ಲರಿಗೂ ಮುಂದಿನ 3 ತಿಂಗಳು ಸಮಗ್ರ ಆಹಾರ ಪದಾರ್ಥ ಒಳಗೊಂಡ ಉಚಿತ ದಿನಸಿ ಕಿಟ್ ವಿತರಿಸಬೇಕು

*ತಿಂಗಳಿಗೆ ₹7000ರಂತೆ 3 ತಿಂಗಳ ಸಂಬಳವನ್ನು ಮುಂಚಿತವಾಗಿ ಆಪತ್ಕಾಲದ ಹಣವಾಗಿ ನೀಡಬೇಕು

*ನರೇಗಾ ಕೂಲಿಯನ್ನು ₹375ಕ್ಕೆ ಹಾಗೂ ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸಬೇಕು. ಕಟುಂಬದ ಒಬ್ಬ ಸದಸ್ಯರಿಗೆ ಕೆಲಸ ಎಂಬ ನಿಯಮ ತೆಗೆದುಹಾಕು, ಒಡಿಶಾ ಮಾದರಿಯಂತೆ ನಗರ ಪ್ರದೇಶಕ್ಕೂ ವಿಸ್ತರಿಸಬೇಕು 

*ಲಾಕ್‌ಡೌನ್ ಕಾಲದ ಸಂಬಳವನ್ನು ಎಲ್ಲ ಕಾರ್ಮಿಕರಿಗೆ ಖಾತ್ರಿಪಡಿಸಬೇಕು 

*ಬಿತ್ತನೆ ಬೀಜಗಳನ್ನು ಉಚಿತವಾಗಿ ನೀಡಬೇಕು; ರೈತರಿಗೆ ಹಣಕಾಸು ನೆರವು ಒದಗಿಸಬೇಕು. ಶೂನ್ಯ ಬಡ್ಡಿದರದ ಸಾಲದ ವ್ಯಸವ್ಥೆ ಮಾಡಬೇಕು

*ರೈತರು ಬೆಳೆದ ಎಲ್ಲ ಬೆಳೆಗಳನ್ನು ಖರೀದಿಸಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಜನರಿಗೆ ತಲುಪಿಸಬೇಕು. ಬೆಳೆಗೆ ಮಾರುಕಟ್ಟೆ ಹಾಗೂ ವೈಜ್ಞಾನಿಕ ದರ ನಿಗದಿಪಡಿಡಬೇಕು

*ಕೊರೊನಾ ಕಾರಣದಿಂದ ನಷ್ಟದಲ್ಲಿರುವ ಸಣ್ಣ, ಮಧ್ಯಮ ಹಾಗೂ ಗುಡಿ ಕೈಗಾರಿಕೆಗಳಿಗೆ ಸಹಾಯಧನ ಘೋಷಿಸಬೇಕು

*ಶ್ರಮಿಕರ ಮಕ್ಕಳು ಓದುತ್ತಿರುವ ಸರ್ಕಾರಿ ಹಾಗೂ ಖಾಸಗಿ ಶಾಲಾ–ಕಾಲೇಜುಗಳ ಶುಲ್ಕದಿಂದ ವಿನಾಯಿತಿ ನೀಡಬೇಕು 

*ಲಾಕ್‌ಡೌನ್ ಮುಗಿದ ಬಳಿಕ ಬಡವರ ಹಿತದೃಷ್ಟಿಯಿಂದ ಮದ್ಯ ಮಾರಾಟದ ಮೇಲಿನ ನಿಷೇಧ ಮುಂದುವರಿಸಬೇಕು

*ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಬೇಕು

*ಬದುಕಿಗಾಗಿ ವೇಶ್ಯಾವೃತ್ತಿ ಮಾಡುವವರಿಗೆ ವೈದ್ಯಕೀಯ ಸೌಲಭ್ಯ ಹಾಗೂ ಎಚ್‌ಐವಿ ಮಾತ್ರ ಪೂರೈಸಬೇಕು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು