ಭಾನುವಾರ, ಜುಲೈ 25, 2021
25 °C

ಮೇ ತಿಂಗಳಲ್ಲಿ ಕೊರೊನಾವೈರಸ್ ಸಂಬಂಧಿಸಿದ ಗೂಗಲ್ ಹುಡುಕಾಟ ಕಡಿಮೆ

ಪಿಟಿಐ Updated:

ಅಕ್ಷರ ಗಾತ್ರ : | |

coronavirus

ನವದೆಹಲಿ: ಮೇ ತಿಂಗಳಲ್ಲಿ ಕೊರೊನಾವೈರಸ್‌ಗೆ ಸಂಬಂಧಿಸಿದ ವಿಷಯಗಳನ್ನು ಗೂಗಲ್‌ನಲ್ಲಿ ಹುಡುಕಾಡಿದವರ ಸಂಖ್ಯೆ ಕಡಿಮೆಯಾಗಿದೆ. ಕೊರೊನಾವೈರಸ್ ವಿಷಯಗಳ ಬದಲು ಜನರು ಸಿನಿಮಾ, ಹಮಾಮಾನದ ಬಗ್ಗೆ ಹೆಚ್ಚು ಹುಡುಕಿದ್ದಾರೆ.

ಗೂಗಲ್ ಸರ್ಚ್ ಟ್ರೆಂಡ್ ಪ್ರಕಾರ ಏಪ್ರಿಲ್ ತಿಂಗಳಲ್ಲಿ ಕೋವಿಡ್-19 ಪ್ರಕರಣಗಳು ಏರಿಕೆಯಾಗುತ್ತಿದ್ದಂತೆ ಈ ಬಗ್ಗೆ ಹುಡುಕಾಟ ಜಾಸ್ತಿಯಾಗಿತ್ತು. ಆದರೆ ಮೇ ತಿಂಗಳಲ್ಲಿ ಹುಡುಕಾಟದ ಪ್ರಮಾಣ ಏಪ್ರಿಲ್‌ ತಿಂಗಳಲ್ಲಿ ಮಾಡಿದ ಹುಡುಕಾಟದ ಅರ್ಧದಷ್ಟಿದೆ.

ಮೇ ತಿಂಗಳಲ್ಲಿ ಕೊರೊನಾವೈರಸ್ ಎಂಬ ಪದ ಗೂಗಲ್ ಹುಡುಕಾಟ ಪದಗಳ ಪಟ್ಟಿಯಲ್ಲಿ 21ನೇ ಸ್ಥಾನದಲ್ಲಿದೆ. ಸಿನಿಮಾ, ಅರ್ಥ, ಸುದ್ದಿ ಮತ್ತು ಹವಾಮಾನ ಇವು ಹೆಚ್ಚು ಬಾರಿ ಸರ್ಚ್ ಆಗಿವೆ.

ಭಾರತದಲ್ಲಿ ಈ ವಿಷಯಗಳು ಅತೀ ಹೆಚ್ಚು ಸರ್ಚ್ ಆಗಿದ್ದು. ಜನರು ಕೋವಿಡ್-19 ಪಿಡುಗು ಆವರಿಸುವುದಕ್ಕಿಂತ ಮೊದಲಿನ ಜೀವನಕ್ಕೆ ಮರಳುತ್ತಿರುವ ಸೂಚನೆಯನ್ನು ಇದು ನೀಡುತ್ತಿದೆ ಎಂದು ಹೇಳಲಾಗುತ್ತಿದೆ.

ಕೋವಿಡ್-19 ಹೊತ್ತಲ್ಲಿ ಯಾವುದೇ ಕ್ರಿಕೆಟ್ ಪಂದ್ಯಗಳು ನಡೆದಿಲ್ಲ. ಕ್ರಿಕೆಟ್‌ಗಿಂತ 5  ಪಟ್ಟು ಹೆಚ್ಚು ಬಾರಿ ಕೊರೊನಾವೈರಸ್ ಪದ ಸರ್ಚ್ ಆಗಿದೆ.  ಮೇ ತಿಂಗಳಲ್ಲಿ ಅತೀ ಹೆಚ್ಚು ಸರ್ಚ್ ಆಗಿದ್ದು  ಲಾಕ್‌ಡೌನ್ 4.0 ಮತ್ತು ಈದ್ ಮುಬಾರಕ್.

ಅದೇ ವೇಳೆ ಕೊರೊನಾವೈರಸ್‌ಗೆ ಸಂಬಂಧಿಸಿದ ಕಾಯಿಲೆ ಯಾವುದು? ರೋಗ ಲಕ್ಷಣ ಇಲ್ಲದೇ ಇದ್ದವರಿಂದ ಕೊರೊನಾವೈರಸ್ ಹರಡುತ್ತಿದೆಯೇ? ಮೇ.7ರ ವರೆಗೆ ಲಾಕ್‌ಡೌನ್ ವಿಸ್ತರಣೆ ಆಗಲಿದೆಯೇ ? ಎಂಬ  ಪ್ರಶ್ನೆಗಳನ್ನು ಗೂಗಲ್‌ನಲ್ಲಿ ಕೇಳಲಾಗಿದೆ. 

ಮಾರ್ಚ್  25ಕ್ಕೆ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿದ್ದ ಕೇಂದ್ರ ಸರ್ಕಾರ ಆಮೇಲೆ ಅದನ್ನು ಕೆಲವು ವಾರಗಳಿಗೆ ವಿಸ್ತರಣೆಗೊಳಿಸಿತ್ತು. ಮೇ 4-17ರವರೆಗೆ ಮೂರನೇ ಮತ್ತು ಮೇ18-31ರವರೆಗೆ ನಾಲ್ಕನೇ ಲಾಕ್‌ಡೌನ್ ಇತ್ತು.

 Coronavirus lockdown zones Delhi ಎಂಬ ವಾಕ್ಯದ ಹುಡುಕಾಟದ ಏರಿಕೆ ಒಂದು ತಿಂಗಳಲ್ಲಿ ಶೇ.1,800 ಆಗಿದ್ದು Italy coronavirus vaccine ಎಂಬ ಪದದ  ಹುಡುಕಾಟ ಶೇ.750ರಷ್ಟಾಗಿದೆ.

 ಮೇ ತಿಂಗಳಲ್ಲಿ Vaccine ಎಂಬ ಪದದ ಹುಡುಕಾಟ ಶೇ. 190ರಷ್ಟು ಏರಿಕೆಯಾಗಿದೆ. ಗೋವಾ, ಮೇಘಾಲಯ, ಚಂಡೀಗಡ ಮತ್ತು ತ್ರಿಪುರಾದ ಜನರು ಅತೀ ಹೆಚ್ಚು ಬಾರಿ ಗೂಗಲ್‌ನಲ್ಲಿ  ಕೊರೊನಾವೈರಸ್ ಬಗ್ಗೆ ಸರ್ಚ್  ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು