ಮಂಗಳವಾರ, ಮಾರ್ಚ್ 31, 2020
19 °C

ಕೋವಿಡ್‌: ಅಫ್ಘಾನಿಸ್ಥಾನ, ಫಿಲಿಪೈನ್ಸ್‌, ಮಲೇಷ್ಯಾ ಪ್ರಯಾಣಿಕರಿಗೆ ಭಾರತ ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್–19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆ ಭಾರತ ಸರ್ಕಾರ ಅಫ್ಘಾನಿಸ್ಥಾನ, ಫಿಲಿಪೈನ್ಸ್ ಮತ್ತು ಮಲೇಷ್ಯಾದ ಪ್ರಯಾಣಿಕರಿಗೆ ಮಾರ್ಚ್‌ 31ರವರೆಗೆ ನಿರ್ಬಂಧ ವಿಧಿಸಿದೆ.

ಕೋವಿಡ್‌–19 ಸೋಂಕು ಹರಡುತ್ತಿರುವುದನ್ನು ತಡೆಯಲು ಟರ್ಕಿ ದೇಶವು ಯೂರೋಪ್‌ನ 9 ದೇಶಗಳ ಪ್ರಯಾಣಿಕರಿಗೆ ಪ್ರವೇಶವನ್ನು ಮಾರ್ಚ್‌ 28ರವರೆಗೆ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ. 

ಕೋವಿಡ್‌–19 ಸೋಂಕಿಗೆ ಜಗತ್ತಿನಾದ್ಯಂತ ಒಟ್ಟು 7,174 ಜನರು ಮೃತಪಟ್ಟಿದ್ದು, 1,82,725 ಜನರು ಸೋಂಕು ಪೀಡಿತರಾಗಿದ್ದಾರೆ. ಭಾರತದಲ್ಲಿ ಒಟ್ಟು 127 ಜನರಿಗೆ ಕೊರೊನಾ ವೈರಸ್‌ ತಗುಲಿದ್ದು ಮೂವರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು