ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಡರ್-19 ವಿಶ್ವ ಕಪ್ ಕ್ರಿಕೆಟ್: ಗೆದ್ದ ನಂತರ ಉದ್ಧಟತನ ತೋರಿದ ಬಾಂಗ್ಲಾ

Last Updated 10 ಫೆಬ್ರುವರಿ 2020, 9:05 IST
ಅಕ್ಷರ ಗಾತ್ರ
ADVERTISEMENT
""

ಪೊಷೆಸ್ಟ್ರೂಮ್‌: ಕ್ರಿಕೆಟ್‌ಯುವ ವಿಶ್ವಕಪ್‌ ಗೆದ್ದವೇಳೆ ಬಾಂಗ್ಲಾ ತಂಡ ಹಾಗೂ ಭಾರತದ ಯುವ ಆಟಗಾರರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ಭಾನುವಾರನಡೆದಿದೆ.

ಈ ಘಟನೆ ವಿಶ್ವ ಕ್ರಿಕೆಟ್ ಪ್ರೇಮಿಗಳಲ್ಲಿ ಬೇಸರಕ್ಕೆ ಕಾರಣವಾಗಿದೆ. ಬಾಂಗ್ಲಾ ಯುವ ಆಟಗಾರರು ಭಾರತವನ್ನು ಫೈನಲ್ ನಲ್ಲಿಸೋಲಿಸಿದ ನಂತರಬಾಂಗ್ಲಾ ಆಟಗಾರನೊಬ್ಬ ಭಾರತೀಯ ಆಟಗಾರನ ಕುರಿತು ಆಡಿದ ಮಾತು ಅಲ್ಲಿದ್ದ ಇತರೆ ಭಾರತೀಯ ಆಟಗಾರರನ್ನು ರೊಚ್ಚಿಗೆಬ್ಬಿಸಿತ್ತು. ಇದರಿಂದಾಗಿ ಆಟಗಾರರ ನಡುವೆ ಮಾತಿನ ಚಕಮಕಿ ಆರಂಭಾಯಿತು.

ಈ ಸಂದರ್ಭದಲ್ಲಿ ಭಾರತ ತಂಡದ ನಾಯಕಪ್ರಿಯಂಗರ್ಗ್ ಮಧ್ಯಪ್ರವೇಶಿಸಿದಾಗಲೂ ಬಾಂಗ್ಲಾ ಆಟಗಾರರು ತಮ್ಮ ದರ್ಪ ತೋರಿದರು. ಆಗಎರಡೂ ಆಟಗಾರರ ನಡುವೆ ಘರ್ಷಣೆ ನಡೆಯುವ ಹಂತಕ್ಕೆ ತಲುಪಿದೆ.ಕ್ರಿಕೆಟ್ ಚಿತ್ರೀಕರಣ ನಡೆಸುತ್ತಿದ್ದ ಕ್ಯಾಮರಾಗಳು ಪ್ರೇಕ್ಷಕರ ಗ್ಯಾಲರಿಯತ್ತ ತಮ್ಮ ಗಮನ ಹರಿಸಿದ್ದರಿಂದ ಅಲ್ಲಿ ಏನಾಯಿತು ಎಂದು ತಂಡದ ಆಟಗಾರರನ್ನು ಹೊರತುಪಡಿಸಿ ಬೇರಾರಿಗೂ ತಿಳಿಯದಾಯಿತು ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಈ ಘಟನೆ ವಿರುದ್ಧ ಭಾರತ ತಂಡದ ಕೋಚ್ ಪರಸ್ ಮಹಂಬ್ರೇ ಯಾವ ಕ್ರಮಕ್ಕೆ ಮುಂದಾಗಿದ್ದಾರೆ ಎಂಬುದುಇನ್ನೂ ತಿಳಿದುಬಂದಿಲ್ಲ.

ಪಂದ್ಯ ಆರಂಭವಾದ ನಂತರಪ್ರತಿಕ್ಷಣದಲ್ಲೂಬಾಂಗ್ಲಾ ಆಟಗಾರರು ಭಾರತೀಯ ಆಟಗಾರರನ್ನು ಕಿಚಾಯಿಸುವುದು, ರೇಗಿಸುವುದು ನಡೆಯುತ್ತಿತ್ತು. ಇದು ಭಾರತ ತಂಡದ ಆಟಗಾರರ ಸಹನೆಯನ್ನು ಕೆಣುಕುವಂತಿತ್ತು. ಪಂದ್ಯದ ಚಿತ್ರೀಕರಣ ನಡೆಸುತ್ತಿದ್ದ ಪ್ರತಿ ಕ್ಯಾಮರಾದಲ್ಲೂ ಇದು ಸೆರೆಯಾಗಿದೆ.

ಒಂದು ಹಂತದಲ್ಲಿ ಬಾಂಗ್ಲಾ ಬೌಲರ್ ಒಬ್ಬ ಭಾರತದ ಬ್ಯಾಟ್ಸ್ ಮನ್‌ಗೆ ಚೆಂಡಿನಿಂದಲೇ ಹೊಡೆಯುವಂತೆ ಎಸೆದ ಎಸೆತ ಮೈದಾನದಲ್ಲಿದ್ದ ಎಲ್ಲಾ ಆಟಗಾರರ ಸಹನೆಯನ್ನು ಕೆಣಕುವಂತಿತ್ತು. ಆ ಸಮಯದಲ್ಲಿ ಭಾರತದ ಬ್ಯಾಟ್ಸ್ ಮನ್ ತಪ್ಪಿಸಿಕೊಳ್ಳದಿದ್ದರೆ ಆತನಿಗೆ ಬಲವಾದ ಹೊಡೆತ ಬಿದ್ದು ಗಾಯವಾಗುವುದಂತೂ ನಿಶ್ಚಿತವಾಗಿತ್ತು. ಈ ಸನ್ನಿವೇಶ ಕೂಡ ಸೆರೆಯಾಗಿದೆ.

ಬಾಂಗ್ಲಾ ಕ್ಯಾಪ್ಟನ್ ಅಕ್ಬರ್ ಅಲಿ ಟ್ರೋಫಿಯೊಂದಿಗೆ

ಪಂದ್ಯದ ಪ್ರತಿಹಂತದಲ್ಲೂ ಬಾಂಗ್ಲಾ ತಂಡದ ಬೌಲರ್‌ಗಳು ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕೆಣಕುತ್ತಿದ್ದುದು ಕೂಡ ಭಾರತದ ಬ್ಯಾಟ್ಸ್‌ಮನ್‌ಗಳು ತಮ್ಮ ವೈಯಕ್ತಿಕ ರನ್‌ಗಳನ್ನು ಏರಿಸುವುದರ ಬದಲುಬಾಂಗ್ಲಾ ಬೌಲರ್‌ಗಳ ವರ್ತನೆಯತ್ತ ಹೆಚ್ಚು ಗಮನ ಹರಿಸಿದ್ದರು. ಇದೂ ಕೂಡ ಭಾರತ ತಂಡ ಹೆಚ್ಚು ಮೊತ್ತ ಪೇರಿಸುವಲ್ಲಿ ವಿಫಲವಾಯಿತು ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಪಂದ್ಯದ ಅಂತ್ಯದ ವೇಳೆ ಇಡೀ ಕ್ರೀಡಾಂಗಣದಲ್ಲಿ ವೀಕ್ಷಕರ ಗ್ಯಾಲರಿಯಲ್ಲಿದ್ದ ಬಾಂಗ್ಲಾ ಪ್ರೇಮಿಗಳೂ ಕೂಡ ಭಾರತದೊಂದಿಗೆ ಯಾವುದೋ ಹಳೆಯ ದ್ವೇಷ ಇದೆಯೇನೋ ಎನ್ನುವಷ್ಟರ ಮಟ್ಟಿಗೆ ತಮ್ಮ ವರ್ತನೆ ತೋರುತ್ತಿದ್ದರು.

ಇಷ್ಟೆಲ್ಲಾ ಘಟನೆಗಳ ಕುರಿತು ಆಟದ ಮುಗಿದ ನಂತರ ಕ್ಯಾಪ್ಟನ್ ಅಕ್ಬರ್ ಆಲಿ ನಮ್ಮ ತಂಡದ ಬೌಲರ್‌ಗಳು ದುರ್ವರ್ತನೆತೋರಿದ್ದಾರೆ. ಇದು ದುರದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿ ಘಟನೆಯನ್ನು ತಿಳಿಗೊಳಿಸುವ ಯತ್ನ ನಡೆಸಿದ್ದಾರೆ.

ಆದರೆ,ಈ ಘಟನೆ ಕುರಿತುಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT