ದೆಹಲಿಯಲ್ಲಿ ಐಟಿ ದಾಳಿ: ₹ 25 ಕೋಟಿ ವಶ

7

ದೆಹಲಿಯಲ್ಲಿ ಐಟಿ ದಾಳಿ: ₹ 25 ಕೋಟಿ ವಶ

Published:
Updated:

ನವದೆಹಲಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೆಹಲಿಯ ವಿವಿಧ ಕಡೆ ನಡೆಸಿದ ಐಟಿ ದಾಳಿಯಲ್ಲಿ ಸುಮಾರು ₹25 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದಾರೆ. 

ಭಾನುವಾರ ಬೆಳಗ್ಗೆ ಇಲ್ಲಿನ ಚಾಂದಿನಿ ಚೌಕ್‌ ಪ್ರದೇಶ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಖಾಸಗಿ ಲಾಕರ್‌ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಹವಾಲ ದಂಧೆಕೋರರು ಇಷ್ಟು ಮೊತ್ತದ ಹಣವನ್ನು ಲಾಕರ್‌ಗಳಲ್ಲಿ ಇರಿಸಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಆದಾಯ ತೆರಿಗೆ ಇಲಾಖೆಯ ಬಲ್ಲಮೂಲಗಳು ತಿಳಿಸಿವೆ. 

ಈ ನಗದು ಹಣ ದೆಹಲಿ ಮೂಲದ ತಂಬಾಂಕು ವ್ಯಾಪಾರಸ್ಥರು, ರಸಾಯನಿಕ ಮಾರಾಟಗಾರರು ಹಾಗೂ ಒಣ ಹಣ್ಣು ವ್ಯಾಪಾರಿಗಳಿಗೆ ಸೇರಿರಬಹುದು ಎಂದು ಶಂಕಿಸಲಾಗಿದೆ. ಇವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹವಾಲ ಮಧ್ಯವರ್ತಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಶಂಕಿಸಲಾಗಿದೆ.  

ಈ ವರ್ಷದಲ್ಲಿ ನಡೆದ ಮೂರನೇ ಅತಿ ದೊಡ್ಡ ದಾಳಿ ಇದಾಗಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ₹700 ಕೋಟಿ ರೂಪಾಯಿ ಮೊತ್ತದ ಹವಾಲ ದಂಧೆ ನಡೆಸುತ್ತಿದ್ದ ವ್ಯಕ್ತಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ₹29 ಗಳನ್ನು ವಶಕ್ಕೆ ಪಡೆಯಲಾಗಿತ್ತು.   

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !