ಗುರುವಾರ , ಜನವರಿ 23, 2020
18 °C

ಫಾಸ್ಟ್ಯಾಗ್‌ ಕಡ್ಡಾಯ: ಹೆಚ್ಚಿದ ಶುಲ್ಕ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ಗಳಲ್ಲಿ ಫಾಸ್ಟ್ಯಾಗ್‌ ಕಡ್ಡಾಯಗೊಳಿಸುವ ಕ್ರಮಗಳನ್ನು ಕೈಗೊಂಡಿದ್ದರಿಂದ ಶುಲ್ಕ ಸಂಗ್ರಹದಲ್ಲೂ ಏರಿಕೆಯಾಗಿದೆ.

ಪ್ರತಿ ದಿನದ ಶುಲ್ಕ ₹68 ಕೋಟಿಯಿಂದ ₹81 ಕೋಟಿಗೆ ಹೆಚ್ಚಳವಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಫಾಸ್ಟ್ಯಾಗ್‌ ಕಡ್ಡಾಯಗೊಳಿಸಿದ ಬಳಿಕ, ಟೋಲ್‌ ಶುಲ್ಕ ಸಂಗ್ರಹದಲ್ಲಿ ನಡೆಯುತ್ತಿದ್ದ ಅವ್ಯವಹಾರಗಳಿಗೂ ಕಡಿವಾಣಿ ಬಿದ್ದಿದೆ. ಸಂಪೂರ್ಣವಾಗಿ ಫಾಸ್ಟ್ಯಾಗ್‌ ಜಾರಿಯಾದ ಬಳಿಕ ಶುಲ್ಕ ಸಂಗ್ರಹದಲ್ಲಿ ಇನ್ನೂ ಹೆಚ್ಚಳವಾಗಲಿದೆ ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು