ಗಿರಿರಾಜ್‌ ಸಿಂಗ್ ಕೋರ್ಟ್‌ಗೆ ಶರಣು

ಸೋಮವಾರ, ಮೇ 27, 2019
23 °C

ಗಿರಿರಾಜ್‌ ಸಿಂಗ್ ಕೋರ್ಟ್‌ಗೆ ಶರಣು

Published:
Updated:
Prajavani

ಬೆಗುಸರಾಯ್‌, ಬಿಹಾರ: ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಸಂಬಂಧ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಸ್ಥಳೀಯ ಕೋರ್ಟ್‌ಗೆ ಮಂಗಳವಾರ ಶರಣಾಗಿದ್ದಾರೆ. 

ಮುಖ್ಯ ನ್ಯಾಯಾಧೀಶ ಠಾಕೂರ್ ಅಮನ್‌ ಕುಮಾರ್ ಎದುರು ಗಿರಿರಾಜ್‌ ಸಿಂಗ್‌ ಶರಣಾಗಿದ್ದಾರೆ. ನ್ಯಾಯಾಧೀಶರು ಗಿರಿರಾಜ್‌ ಸಿಂಗ್‌ ಅವರಿಂದ ₹ 5,000 ಮೊತ್ತದ ಎರಡು ಪ್ರತ್ಯೇಕ ಬಾಂಡ್‌ಗಳನ್ನು ಪಡೆದು ಜಾಮೀನು ಮಂಜೂರು ಮಾಡಿದ್ದಾರೆ.

ಏಪ್ರಿಲ್‌ 24ರಂದು ಬೆಗುಸರಾಯ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿ ವೇಳೆ ಮುಸ್ಲಿಂ ಸಮುದಾಯವನ್ನು ಕುರಿತು ಗಿರಿರಾಜ್‌ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !