4 ತಿಂಗಳ ನಂತರ ಕಚೇರಿಗೆ ಹಾಜರಾದ ಗೋವಾ ಸಿಎಂ ಪರೀಕ್ಕರ್

7

4 ತಿಂಗಳ ನಂತರ ಕಚೇರಿಗೆ ಹಾಜರಾದ ಗೋವಾ ಸಿಎಂ ಪರೀಕ್ಕರ್

Published:
Updated:

ಪಣಜಿ: ಅನಾರೋಗ್ಯ ನಿಮಿತ್ತ ಕರ್ತವ್ಯಕ್ಕೆ ಗೈರು ಹಾಜರಾಗಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರೀಕ್ಕರ್ ನಾಲ್ಕು ತಿಂಗಳ ನಂತರ ಮಂಗಳವಾರ ಕಚೇರಿಗೆ ಹಾಜರಾಗಿದ್ದಾರೆ. ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪರೀಕ್ಕರ್ ಕಳೆದ ವರ್ಷ ಫೆಬ್ರುವರಿಯಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳಗ್ಗೆ 10.45ಕ್ಕೆ ಮುಖ್ಯಮಂತ್ರಿ ಕಚೇರಿಗೆ ಆಗಮಿಸಿದ್ದರು ಎಂದು ಮೂಲಗಳು ಹೇಳಿವೆ. ನೂರಾರು ಬಿಜೆಪಿ ಕಾರ್ಯಕರ್ತರು ಗೋವಾ ವಿಧಾನಸೌಧಕ್ಕೆ ಆಗಮಿಸಿ,  ಪರೀಕ್ಕರ್‌ಗೆ ಸ್ವಾಗತ ಕೋರಿದ್ದಾರೆ.

ಈಗಿರುವ ಉದ್ಯೋಗವಕಾಶಗಳು, ನೌಕರರ ಬಡ್ತಿ ಮತ್ತು ವರ್ಗಾವಣೆ ಮೊದಲಾದ ಕಾರ್ಯಗಳ ಬಗ್ಗೆ  ಚರ್ಚಿಸಲು ಪರಿಕ್ಕರ್ ಅವರು ಸಿಬ್ಬಂದಿ ಇಲಾಖೆಯ ತುರ್ತು ಸಭೆಯನ್ನು ಕರೆದಿದ್ದಾರೆ ಎಂದು ಪಿಟಿಐ ಸುದ್ದಿ ಮಾಡಿದೆ. 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !