ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎಂಎಂ ಶಾಸಕಾಂಗ ಪಕ್ಷದ ನಾಯಕನಾಗಿ ಹೇಮಂತ್‌ ಆಯ್ಕೆ

Last Updated 24 ಡಿಸೆಂಬರ್ 2019, 20:39 IST
ಅಕ್ಷರ ಗಾತ್ರ

ರಾಂಚಿ: ಜಾರ್ಖಂಡ್‌ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಜೆಎಂಎಂ ಶಾಸಕಾಂಗ ಪಕ್ಷದ ನಾಯಕನಾಗಿ ಹೇಮಂತ್‌ ಸೊರೇನ್‌ ಮಂಗಳವಾರ ಆಯ್ಕೆಯಾಗಿದ್ದಾರೆ.

ಜೆಎಂಎಂ ಶಾಸಕರು ಮಂಗಳವಾರ ಸಭೆ ನಡೆಸಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿದರು.

81 ಸದಸ್ಯ ಬಲದ ಜಾರ್ಖಂಡ್‌ ವಿಧಾನಸಭೆಯಲ್ಲಿ ಜೆಎಂಎಂ, ಕಾಂಗ್ರೆಸ್‌ ಮತ್ತು ಆರ್‌ಜೆಡಿ ಮೈತ್ರಿಕೂಟ 47 ಸದಸ್ಯರನ್ನು ಹೊಂದಿದೆ. ಹೇಮಂತ್‌ ಸೊರೇನ್‌ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಮೈತ್ರಿಕೂಟ ಈಗಾಗಲೇ ಪ್ರಕಟಿಸಿದೆ. ಸರ್ಕಾರ ರಚನೆಗೆ ಹಕ್ಕು ಮಂಡಿಸುವುದಕ್ಕಿಂತ ಮುನ್ನ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಖಂಡ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಲು ನವದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಶಾಸಕರು ಪ್ರತ್ಯೇಕ ಸಭೆ ನಡೆಸಿ ತಮ್ಮ ನಾಯಕನನ್ನು ಆಯ್ಕೆ ಮಾಡಲಿದ್ದಾರೆ. ಚುನಾವಣೆಯಲ್ಲಿ ಜೆಎಂಎಂ 30, ಕಾಂಗ್ರೆಸ್‌ 16 ಹಾಗೂ ಆರ್‌ಜೆಡಿ ಒಂದು ಸ್ಥಾನ ಪಡೆದಿವೆ. ಬಿಜೆಪಿ 25, ಎಜೆಎಸ್‌ಯು ಎರಡು, ಜೆವಿಎಂ (ಪಿ) ಮೂರು ಹಾಗೂ ಇತರರು ನಾಲ್ವರು ಗೆದ್ದಿದ್ದಾರೆ.

ಮತಗಳಿಕೆ

ಮತ ಗಳಿಕೆ ಪ್ರಮಾಣದಲ್ಲಿ, 2014ಕ್ಕೆ ಹೋಲಿಸಿದರೆ ಜೆಎಂಎಂ ಈ ಬಾರಿ ಶೇ 2 ರಷ್ಟು ಮತಗಳನ್ನು ಕಳೆದುಕೊಂಡಿದೆ. ಆದರೆ, ಕಳೆದ ಬಾರಿ 19ರಲ್ಲಿ ಗೆದ್ದಿದ್ದ ಜೆಎಂಎಂ ಈ ಬಾರಿ 30 ಕ್ಷೇತ್ರಗಳಲ್ಲಿ ಗೆದ್ದು, ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಚುನಾವಣಾ ವಿಶ್ಲೇಷಣೆಯ ಅಂಕಿ–ಸಂಖ್ಯೆಗಳ ಪ್ರಕಾರ ಬಿಜೆಪಿ 2014ಕ್ಕಿಂತ ಈ ಬಾರಿ ಮತ ಗಳಿಕೆಯನ್ನು ಶೇ 2 ರಷ್ಟು ಹೆಚ್ಚಿಸಿಕೊಂಡಿದೆ. ಆದರೆ, ಕಳೆದ ಬಾರಿ 37 ಸ್ಥಾನ ಗೆದ್ದಿದ್ದ ಬಿಜೆಪಿ, ಈ ಬಾರಿ 25ಕ್ಕೆ ತೃಪ್ತಿ ಪಡಬೇಕಾಯಿತು. ಕಾಂಗ್ರೆಸ್‌ ಮತ ಗಳಿಕೆ ಪ್ರಮಾಣವನ್ನು ಶೇ 3.42 ರಷ್ಟು ಹೆಚ್ಚಿಸಿಕೊಂಡಿದೆ. ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಪಡೆದುಕೊಂಡಿದೆ.

ಜೆಎಂಎಂ

ಚುನಾವಣೆ ನಡೆದ ವರ್ಷ; ಶಾಸಕರ ಸಂಖ್ಯೆ; ಮತ ಗಳಿಕೆ ಪ್ರಮಾಣ (ಶೇ)

2009; 18; 15.2

2014;19; 20.43

2019; 30; 18.72

ಬಿಜೆಪಿ

ಚುನಾವಣೆ ವರ್ಷ ಶಾಸಕರ ಸಂಖ್ಯೆ; ಮತ ಗಳಿಕೆ ಪ್ರಮಾಣ (ಶೇ)

2009; 18; 20.18

2014; 37; 31.26

2019; 25; 33.37

ಕಾಂಗ್ರೆಸ್‌

ಚುನಾವಣೆ ವರ್ಷ; ಶಾಸಕರ ಸಂಖ್ಯೆ; ಮತ ಗಳಿಕೆ ಪ್ರಮಾಣ (ಶೇ)

2009; 14; 16.6

2014; 9 ;10.46

2019; 16; 13.88

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT