ಶುಕ್ರವಾರ, ಫೆಬ್ರವರಿ 28, 2020
19 °C

ಮಸೀದಿಯಲ್ಲಿ ಹಿಂದೂ ಜೋಡಿ ಮದುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಲೆಪ್ಪಿ (ಕೇರಳ): ಮಸೀದಿಯೊಂದರಲ್ಲಿ ಹಿಂದೂ ಜೋಡಿಯ ಮದುವೆಗೆ ಅವಕಾಶ ಕಲ್ಪಿಸುವ ಮೂಲಕ ಇಲ್ಲಿಗೆ ಸಮೀಪದ ಚೆರುವಲ್ಲಿಯ ಮುಸ್ಲಿಂ ಜಮಾತ್‌ ಸೌಹಾರ್ದ ಮೆರೆದಿದೆ.

ವಧು–ವರರಾದ ಅಂಜು ಮತ್ತು ಶರತ್‌ ಪರಸ್ಪರ ಹಾರ ಬದಲಾಯಿಸಿಕೊಂಡರಲ್ಲದೇ, ಹಿಂದೂ ಸಂಪ್ರದಾಯದಂತೆ ಎಲ್ಲ ಧಾರ್ಮಿಕ ವಿಧಿಗಳನ್ನು ನೆರವೇರಿಸಿ ಸಪ್ತಪದಿ ತುಳಿದರು. ಈ ಮದುವೆಗೆ ಅವರಿಬ್ಬರ ಬಂಧು–ಮಿತ್ರರಲ್ಲದೇ ಮುಸ್ಲಿಮರು ಸಹ ಸಾಕ್ಷಿಯಾದರು. ಮಸೀದಿ ಆವರಣದಲ್ಲಿಯೇ ಸಸ್ಯಾಹಾರಿ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ನವಜೋಡಿಗೆ ಮಸೀದಿ ಆಡಳಿತ ಮಂಡಳಿ 8 ಸವರನ್‌ ಚಿನ್ನವನ್ನು ಉಡುಗೊರೆಯಾಗಿ ನೀಡಿದೆ.

‘ವಧು ಅಂಜು ಅವರ ಮನೆಯವರು ಮದುವೆಯ ಖರ್ಚು ಭರಿಸದಷ್ಟು ಬಡವರಾಗಿದ್ದಾರೆ. ಹೀಗಾಗಿ ಅವರ ಕಷ್ಟಕ್ಕೆ ಸ್ಪಂದಿಸಿ, ಈ ಮದುವೆಗೆ ವ್ಯವಸ್ಥೆ ಮಾಡಿರುವುದಾಗಿ’ ಮಸೀದಿಯ ಆಡಳಿತ ಮಂಡಳಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು