ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟ ಯೋಜನೆಯಡಿ ಬೆಳಿಗ್ಗೆ ತಿಂಡಿಯಿಲ್ಲ

ಸ್ಪಷ್ಟನೆ ನೀಡಿದ ಸಚಿವ ರಮೇಶ್‌ ಪೋಖ್ರಿಯಾಲ್‌
Last Updated 27 ಜೂನ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಕೇಂದ್ರ ಸರ್ಕಾರ ನೀಡುತ್ತಿರುವಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಬೆಳಗ್ಗೆ ತಿಂಡಿ ನೀಡುವ ಪ್ರಸ್ತಾವವಿಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ(ಎಚ್ಆರ್‌ಡಿ)ಸಚಿವರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ತಿಳಿಸಿದ್ದಾರೆ.

ಬಿಸಿಯೂಟ ಯೋಜನೆಯಡಿ ಉಪಾಹಾರ ಸೇರಿಸುವ ಯೋಜನೆ ಇದೆಯೇ ಎಂದುರಾಜ್ಯ ಸಭೆಯಲ್ಲಿ ಕೇಳಲಾಗಿದ್ದ ಲಿಖಿತ ಪ್ರಶ್ನೆಯೊಂದಕ್ಕೆ, ನಿಶಾಂಕ್‌ ಉತ್ತರಿಸಿದರು.

‘ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ 2013 ರಂತೆ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿಒಂದರಿಂದ ಎಂಟನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಒಂದು ಹೊತ್ತಿನ ಬಿಸಿಯೂಟವನ್ನು ಉಚಿತವಾಗಿ ನೀಡಲಾಗುತ್ತಿದೆ. ಕೆಲ ರಾಜ್ಯಗಳು ತಮ್ಮ ಸ್ವಂತ ಸಂಪನ್ಮೂಲದಿಂದಹಾಲು, ಮೊಟ್ಟೆ, ಹಣ್ಣು ನೀಡುತ್ತಿವೆ. 2018–19ನೇ ಸಾಲಿನಲ್ಲಿ 11.34 ಲಕ್ಷ ಶಾಲೆಗಳಲ್ಲಿ ಸರಾಸರಿ ನಿತ್ಯ 9.17 ಕೋಟಿ ಮಕ್ಕಳಿಗೆ ಬಿಸಿಯೂಟ ನೀಡಲಾಗಿದೆ’ ಎಂದು ನಿಶಾಂಕ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT