ಉನ್ನತ ಶಿಕ್ಷಣ ಸಂಸ್ಥೆ: ಐಐಎಸ್‌ಸಿಗೆ 2ನೇ ರ್‍ಯಾಂಕ್‌, ಐಐಟಿ ಮದ್ರಾಸ್ ನಂ.1

ಶನಿವಾರ, ಏಪ್ರಿಲ್ 20, 2019
29 °C

ಉನ್ನತ ಶಿಕ್ಷಣ ಸಂಸ್ಥೆ: ಐಐಎಸ್‌ಸಿಗೆ 2ನೇ ರ್‍ಯಾಂಕ್‌, ಐಐಟಿ ಮದ್ರಾಸ್ ನಂ.1

Published:
Updated:

ನವದೆಹಲಿ: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿರುವ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಬೆಂಗಳೂರಿನ ಎರಡು ಸಂಸ್ಥೆಗಳು ನಿಗದಿತ ಕ್ಷೇತ್ರದಲ್ಲಿ ಮೊದಲ ಸ್ಥಾನ ಪಡೆದಿವೆ. ಅತ್ಯುನ್ನತ ಶಿಕ್ಷಣ ಸಂಸ್ಥೆಗಳ ರ್‍ಯಾಂಕಿಂಗ್‌ ಪೈಕಿ ಮದ್ರಾಸ್‌ನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ(ಐಐಟಿ) ನಂ.1 ಆಗಿ ಹೊರಹೊಮ್ಮಿದೆ. 

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ಮತ್ತು ದೆಹಲಿ ಐಐಟಿ ಕ್ರಮವಾಗಿ ಎರಡು ಹಾಗೂ ಮೂರನೇ ರ್‍ಯಾಂಕ್‌ ಪಡೆದಿವೆ. ಬಿಡುಗಡೆಯಾಗಿರುವ ಟಾಪ್‌ 10 ಉನ್ನತ ಶಿಕ್ಷಣ ಸಂಸ್ಥೆಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಏಳು ರ್‍ಯಾಂಕ್‌ಗಳಲ್ಲಿ ಐಐಟಿಗಳೇ ಇವೆ. 

ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ(ಜೆಎನ್‌ಯು) ಮತ್ತು ಬನಾರಸ್‌ ಹಿಂದೂ ವಿಶ್ವವಿದ್ಯಾಲಯ, ಕ್ರಮವಾಗಿ ಏಳು ಮತ್ತು 10ನೇ ರ್‍ಯಾಂಕ್‌ ಪಡೆದಿವೆ. ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್‌ ದೇಶದಲ್ಲಿಯೇ ಉತ್ತಮ ಕಾಲೇಜು ಎಂಬ ಹೆಗ್ಗಳಿಕೆ ಪಡೆದಿದ್ದು, ಇದೇ ವಿಶ್ವವಿದ್ಯಾಲಯದ ಸೇಂಟ್‌ ಸ್ಟೀಫನ್ಸ್‌ ಕಾಲೇಜು ನಾಲ್ಕನೇ ರ್‍ಯಾಂಕ್‌ ಹೊಂದಿದೆ.  

ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಪೈಕಿ ಏಮ್ಸ್‌ ಮೊದಲ ಸ್ಥಾನದಲ್ಲಿದೆ. ಕಾನೂನು ಕಾಲೇಜುಗಳ ಪೈಕಿ ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌, ಮ್ಯಾನೇಜ್‌ಮೆಂಟ್‌ ಸಂಸ್ಥೆಗಳ ಪೈಕಿ ಬೆಂಗಳೂರಿನ ಐಐಎಂ ಮೊದಲ ಸ್ಥಾನದಲ್ಲಿವೆ. ಫಾರ್ಮಸಿ ಶಿಕ್ಷಣದಲ್ಲಿ ದೆಹಲಿಯ ಜಮಿಯಾ ಹಮ್‌ದರ್ದ್‌ ಉನ್ನತ ಸ್ಥಾನ ಪಡೆದಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !