ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪಟ್ಟಿಯಲ್ಲಿ ಟರ್ಕಿ ಹಿಂದಿಟ್ಟ ಭಾರತ 9ನೇ ಸ್ಥಾನಕ್ಕೆ: ಜರ್ಮನಿಯ ಸನಿಹಕ್ಕೆ

ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಅತ್ಯಧಿಕ ಕೊರೊನಾ ವೈರಸ್‌ ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಇತ್ತೀಚೆಗಷ್ಟೇ ಇರಾನ್‌ ಅನ್ನು ಹಿಂದಿಕ್ಕಿ 10ನೇ ಸ್ಥಾನಕ್ಕೇರಿದ್ದ ಭಾರತ, ಇಂದು (ಮೇ 29) ಟರ್ಕಿಯನ್ನು ಹಿಂದಿಟ್ಟು 9ನೇ ಸ್ಥಾನಕ್ಕೆ ಬಂದಿದೆ. ಜರ್ಮನಿಯ ಸನಿಹದಲ್ಲಿ ನಿಂತಿದೆ.

ಭಾರತದಲ್ಲಿ ಶುಕ್ರವಾರ 7466 ಸೋಂಕು ಪ್ರಕರಣಗಳು ವರದಿಯಾದವು. ಇದು ದಿನವೊಂದರಲ್ಲಿ ಪತ್ತೆಯಾದ ಪ್ರಕರಣಗಳ ಈ ವರೆಗಿನ ದಾಖಲೆಯ ಸಂಖ್ಯೆಯೂ ಹೌದು. ಈ ಮೂಲಕ ದೇಶದ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 1,65,799ಕ್ಕೆ ಏರಿತು. ಇದೇ ವೇಳೆ, 1,60,979 ಸೋಂಕಿತರನ್ನು ಹೊಂದಿರುವ ಟರ್ಕಿಯನ್ನು ಹಿಂದಿಕ್ಕಿತು. ಸದ್ಯ ಟರ್ಕಿಯಲ್ಲಿ 4461 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದೇ ವೇಳೆ ಭಾರತದಲ್ಲಿ ಸೋಂಕಿಗೆ 4706 ಮಂದಿ ಪ್ರಾಣ ತೆತ್ತಿದ್ದಾರೆ.

ಅತಿ ಹೆಚ್ಚು ಕೋವಿಡ್‌ ಪ್ರಕರಣಗಳನ್ನು ಹೊಂದಿರುವ
ವಿಶ್ವದ ಅಗ್ರ 10 ರಾಷ್ಟ್ರಗಳು–(ಜಾನ್‌ ಹಾಪ್ಕಿನ್ಸ್‌ ವೆಬ್‌ಸೈಟ್‌)

ಮೇ. 26ರಂದು ಭಾರತ ಇರಾನ್‌ ಅನ್ನು ಹಿಂದಿಕ್ಕಿತ್ತು. ಈಗ ಸದ್ಯ ಇರಾನ್‌ನಲ್ಲಿ 1,43,849 ಸೋಂಕಿತರಿದ್ದಾರೆ.

ಭಾರತದಲ್ಲಿ ಸೋಂಕು ಪ್ರಕರಣಗಳು ಸಾವಿರದ ಸಂಖ್ಯೆಯಲ್ಲಿದ್ದಾಗ ಜರ್ಮನಿಯಲ್ಲಿ ಕೋವಿಡ್‌–19 ತಾಂಡವವಾಡುತ್ತಿತ್ತು. ಸದ್ಯ ಭಾರತ ಈಗ ಜರ್ಮನಿಗಿಂತಲೂ ಕೇವಲ ಒಂದು ಸ್ಥಾನವಷ್ಟೇ ಹಿಂದಿದೆ. ಅಲ್ಲಿ ಸದ್ಯ 1,82,196 ಸೋಂಕಿತರಿದ್ದಾರೆ.

ಕೋವಿಡ್‌–19 ಮಹಾಮಾರಿ ಇಟಲಿಯನ್ನು ಇನ್ನಿಲ್ಲದಂತೆ ಬಾಧಿಸುತ್ತಿದ್ದ ಹೊತ್ತಿನಲ್ಲಿ ಭಾರತದಲ್ಲಿ ಅದರ ಪ್ರಮಾಣ ಪ್ರಮಾಣ ತೀರ ಕಡಿಮೆ ಸಂಖ್ಯೆಯಲ್ಲಿತ್ತು. ಸದ್ಯ ಇಟಲಿ ಭಾರತಕ್ಕಿಂತ ಕೇವಲ ಎರಡು ಸ್ಥಾನ ಮುಂದಿದೆ. ವಿಶ್ವದ ಪಟ್ಟಿಯಲ್ಲಿ ಅದು 6ನೇ ಸ್ಥಾನದಲ್ಲಿದೆ.

ಕೊರೊನಾ ವೈರಸ್‌ ನಿಯಂತ್ರಿಸುವ ಕ್ರಮವಾಗಿ ದೇಶದಾದ್ಯಂತ ಜಾರಿ ಮಾಡಲಾಗಿದ್ದ ಲಾಕ್‌ಡೌನ್‌ ಅನ್ನು ಭಾರತ ಸಡಿಲ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT