ಶನಿವಾರ, ಫೆಬ್ರವರಿ 29, 2020
19 °C

ಜಿನ್ನಾ ಕಲ್ಪನೆಗೆ ಜಯವಾಗುತ್ತಿದೆ: ಸಿಎಎ ಬಗ್ಗೆ ಶಶಿ ತರೂರ್ ಅಭಿಪ್ರಾಯ

ಪಿಟಿಐ Updated:

ಅಕ್ಷರ ಗಾತ್ರ : | |

ಜೈಪುರ: ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ) ಎನ್‌ಪಿಆರ್ ಮತ್ತು ಎನ್‌ಆರ್‌ಸಿ ಜಾರಿಗೆ ಕಾರಣವಾಗುವುದಾದರೆ ಅದು ಪಾಕಿಸ್ತಾನದ ಜನಕ ಮೊಹಮ್ಮದ್ ಅಲಿ ಜಿನ್ನಾಗೆ ಗೆಲುವಾದಂತೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.

ಜೈಪುರ ಸಾಹಿತ್ಯೋತ್ಸವದಲ್ಲಿ ಮಾತನಾಡಿದ ಅವರು, ‘ಸಿಎಎ ಜಾರಿಯೊಂದಿಗೆ ದೇಶದಲ್ಲಿ ಜಿನ್ನಾ ಅವರ ಕಲ್ಪನೆ ಸಾಕಾರಗೊಳ್ಳುತ್ತಿದೆ. ಜಿನ್ನಾ ಸಂಪೂರ್ಣ ಜಯಗಳಿಸಿದ್ದಾರೆ ಎಂದು ನಾನು ಹೇಳಲಾರೆ. ಆದರೆ, ಅವರ ಕಲ್ಪನೆಗೆ ಗೆಲುವಾಗುತ್ತಿದೆ. ದೇಶದಲ್ಲಿ ಇನ್ನೂ ಆಯ್ಕೆಗಳಿವೆ. ಅವುಗಳೆಂದರೆ, ಜಿನ್ನಾರ ರಾಷ್ಟ್ರೀಯ ಪರಿಕಲ್ಪನೆ ಮತ್ತು ಗಾಂಧೀಜಿ ಅವರ ರಾಷ್ಟ್ರೀಯ ಪರಿಕಲ್ಪನೆ’ ಎಂದು ಹೇಳಿದ್ದಾರೆ.

‘ಟೆನಿಸ್ ಆಟದ ಮಾದರಿಯಲ್ಲಿ ವಿಶ್ಲೇಷಿಸುವುದಾದರೆ, ಜಿನ್ನಾ ಪರಿಕಲ್ಪನೆಗೆ ಈಗ ಒಂದು ಸೆಟ್ ಅಥವಾ ಮೊದಲ ಸೆಟ್ ಮುನ್ನಡೆ ದೊರಕಿದೆ ಎನ್ನಬಹುದು. ಸಿಎಎ ಜಾರಿಯು ಎನ್‌ಪಿಆರ್ ಮತ್ತು ಎನ್‌ಆರ್‌ಸಿ ಜಾರಿಗೆ ಕಾರಣವಾದರೆ ಅದು ಮುಂದಿನ ಹಂತವಾಗಿರಲಿದೆ. ಇದು ನಿಜವಾಗಿದ್ದೇ ಆದಲ್ಲಿ ಜಿನ್ನಾ ಪರಿಕಲ್ಪನೆಗೆ ಪೂರ್ತಿ ಗೆಲುವು ಸಿಕ್ಕಿದಂತೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು