ಗುರುವಾರ , ಜೂಲೈ 9, 2020
23 °C

ದೆಹಲಿ: 100 ವಾಟ್‌ನ ಬಲ್ಬ್‌ ಬಳಸಿದ್ದಕ್ಕೆ ಬಾಡಿಗೆದಾರರನ್ನೇ ಹತ್ಯೆ ಮಾಡಿದ ಮಾಲೀಕ

ಪಿಟಿಐ Updated:

ಅಕ್ಷರ ಗಾತ್ರ : | |

Crime news

ನವದೆಹಲಿ: 100 ವಾಟ್‌ನ ಬಲ್ಬ್‌ ಉಪಯೋಗಿಸುವ ವಿಚಾರದಲ್ಲಿ ಜಗಳವಾಗಿ ಮನೆ ಮಾಲೀಕನೊಬ್ಬ ಬಾಡಿಗೆದಾರನನ್ನೇ ಹತ್ಯೆ ಮಾಡಿದ ಘಟನೆ ಈಶಾನ್ಯದ ದೆಹಲಿಯ ಹರ್ಷ ವಿಹಾರ್‌ ಎಂಬಲ್ಲಿ ನಡೆದಿದೆ. ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಜಗದೀಶ್ ಎಂದು ಗುರುತಿಸಲಾಗಿದೆ. ಜಗದೀಶ್ ರಿಕ್ಷಾ ಚಾಲಕನಾಗಿದ್ದು, ಪತ್ನಿ ಮತ್ತು ಎಂಟು ವರ್ಷ ವಯಸ್ಸಿನ ಮಗಳ ಜತೆ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು. ಮಾಲೀಕ ಅಮಿತ್ ಮತ್ತು ಕುಟುಂಬದವರು ಗ್ರೌಂಡ್ ಫ್ಲೋರ್‌ನಲ್ಲಿ ವಾಸವಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಶುಕ್ರವಾರ ನಡೆದಿದೆ.

ಜಗದೀಶ್‌ ಪತ್ನಿ ಅಡುಗೆ ಮಾಡುತ್ತಿದ್ದ ರಾತ್ರಿ 7.45ರ ವೇಳೆ ಮನೆಗೆ ಬಂದ ಮಾಲೀಕ 100 ವಾಟ್‌ನ ಬಲ್ಬ್‌ ಉಪಯೋಗಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದರಿಂದ ಹೆಚ್ಚು ವಿದ್ಯುತ್ ವ್ಯಯವಾಗುತ್ತದೆ ಎಂದು ಅದನ್ನು ಬದಲಾಯಿಸಿ ಎಲ್‌ಇಡಿ ಬಲ್ಬ್ ಅಳವಡಿಸಿದ್ದಾರೆ. ಬಳಿಕ ಈ ವಿಚಾರವಾಗಿ ಜಗದೀಶ್ ಮತ್ತು ಮಾಲೀಕನ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಅಮಿತ್ ಹಲ್ಲೆ ನಡೆಸಿದ್ದು, ಜಗದೀಶ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣವೇ ಜಗದೀಶ್ ಪತ್ನಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು