ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌‌ಡೌನ್ ಎಫೆಕ್ಟ್: ಚಿನ್ನ ಮಾರುತ್ತಿದ್ದ ವ್ಯಕ್ತಿ ಈಗ ತರಕಾರಿ ವ್ಯಾಪಾರಿ

Last Updated 2 ಮೇ 2020, 11:19 IST
ಅಕ್ಷರ ಗಾತ್ರ

ಜೈಪುರ (ಪಿಟಿಐ): ಒಂದು ಕಡೆ ಲಾಕ್‌‌ಡೌನ್‌ನಿಂದಾಗಿ ದೇಶದ ಹಲವು ಉದ್ಯಮಗಳು ಪಾತಾಳಕ್ಕೆ ಇಳಿದಿದ್ದರೆ, ಮತ್ತೊಂದು ಕಡೆ ದೇಶದಲ್ಲಿ ಎಷ್ಟೋಸಣ್ಣ ಪುಟ್ಟ ವ್ಯಾಪಾರಿಗಳ ಬದುಕು ನೆಲಕಚ್ಚುವಂತಾಗಿದೆ.

ಇದಕ್ಕೆ ತಾಜಾ ಉದಾಹರಣೆ ರಾಜಸ್ಥಾನದ ಚಿನ್ನದ ಅಂಗಡಿ ಮಾಲೀಕ ಈಗ ತರಕಾರಿ ಮಾರುವಂತಾಗಿದೆ.ಹೌದು ರಾಜಸ್ಥಾನದಲ್ಲಿ 25 ವರ್ಷಗಳಿಂದ ಆಭರಣ ವ್ಯಾಪಾರ ಮಾಡಿಕೊಂಡಿದ್ದ ಹುಕುಮಚಂದ್ ಸೋನಿ ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ. ಈತನನ್ನು ಕೇಳಿದರೆ,ಎಂದಿಗೂ ತಾನು ತರಕಾರಿ ವ್ಯಾಪಾರಿಯಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ ಎನ್ನುತ್ತಾರೆ.

ಒಂದು ಕಾಲದಲ್ಲಿ ದುಬಾರಿ ಆಭರಣಗಳಿಂದ ತುಂಬಿರುತ್ತಿದ್ದ ಈತನ ಅಂಗಡಿಯಲ್ಲಿ ಈಗ ಹಸಿರು ತರಕಾರಿಗಳಿಂದ ತುಂಬಿಹೋಗಿದೆ.
ಉಂಗುರ, ಬೆಳ್ಳಿ ಪದಾರ್ಥಗಳಿಂದತುಂಬಿ ಹೋಗಿರುತ್ತಿದ್ದ ಆತನ ಅಂಗಡಿಯಲ್ಲಿ ಈಗ ಆಲೂಗೆಡ್ಡೆ ಈರುಳ್ಳಿ ಬಂದು ಕುಳಿತಿವೆ.ಚಿನ್ನವನ್ನು ತೂಗುತ್ತಿದ್ದ ತಕ್ಕಡಿ ಜಾಗದಲ್ಲಿ ಈಗ ತರಕಾರಿ ತೂಗುವಂತಾಗಿದೆ.ಜೈಪುರದ ರಾಮ್‌‌ನಗರದ 'ಜೆಪಿ ಜ್ಯುವೆಲ್ಲರಿ ಶಾಪ್‌'‌ ಈಗ ಚಿನ್ನದ ಗ್ರಾಹಕರ ಬದಲಾಗಿ ತರಕಾರಿ ಕೊಳ್ಳುವವರನ್ನು ಆಕರ್ಷಿಸಬೇಕಾಗಿದೆ.ನಾನು ತರಕಾರಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿ ನಾಲ್ಕು ದಿನಗಳಾಗಿದೆ. ನಾನು ಬದುಕಲು ಇರುವ ಏಕೈಕ ಮಾರ್ಗವೆಂದರೆ ಇದೊಂದೆ. ನನಗೆ ದೊಡ್ಡ ಉಳಿತಾಯವಿಲ್ಲ, ದೊಡ್ಡ ಬಂಡವಾಳವಿಲ್ಲ, ಆದ್ದರಿಂದ ನಾನು ತರಕಾರಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದೆ. ನನ್ನ ಆಭರಣ ಅಂಗಡಿ ದೊಡ್ಡದಲ್ಲ, ಆದರೆ, ಕುಟುಂಬ ನಡೆಸಲು ಸಾಕಾಗಿತ್ತುಎಂದು ಹುಕುಮ್ ಚಂದ್ ಹೇಳುತ್ತಾರೆ.

ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ಮಾರ್ಚ್ 25 ರಂದು ಲಾಕ್‌ಡೌನ್ ಘೋಷಣೆಯಾಯಿತು. ನಂತರ, ಎಲ್ಲಾ ಅಂಗಡಿಗಳನ್ನುಮುಚ್ಚುವಂತೆ ಆದೇಶಿಸಲಾಯಿತು. ಕೆಲವು ವಾರಗಳವರೆಗೆ ಹುಕುಮ್ ಚಂದ್ ಅಂಗಡಿ ನಿರ್ವಹಿಸುತ್ತಿದ್ದರು. ನಂತರ ಅಂಗಡಿಯಲ್ಲಿ ವ್ಯಾಪಾರ ಇಲ್ಲದಂತಾಯಿತು. ಕ್ರಮೇಣ ತನ್ನ ಚಿನ್ನದ ಅಂಗಡಿಯನ್ನುತರಕಾರಿ ಅಂಗಡಿಯನ್ನಾಗಿ ಪರಿವರ್ತಿಸಿದ್ದಾರೆ. ಇದು ಕುುಟಂಬ ನಡೆಸಲು ಇರುವ ಒಂದೇ ಮಾರ್ಗ ಎಂದೂಹುಕುಮ್‌ಚಂದ್ ಹೇಳುತ್ತಾರೆ.

ನಾವು ಇಷ್ಟು ದಿನ ಮನೆಯಲ್ಲಿ ಕುಳಿತಿದ್ದೆವುನಮಗೆ ಯಾರು ಹಣ ಆಹಾರ ನೀಡುತ್ತಾರೆ. ಲಾಕ್ ಡೌನ್‌ಗಿಂತ ಮುಂಚೆಉಂಗುರಗಳಂತಹ ಸಣ್ಣಆಭರಣ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೆ.ಹಾನಿಗೊಳಗಾದ ಆಭರಣಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೆ. ಈಗ ಸಮಸ್ಯೆಗೆ ಸಿಲುಕಿದ್ದೇನೆ. ನಾನೂ ಸೇರಿದಂತೆಇತರೆ ಅಂಗಡಿಯವರು ಖಂಡಿತವಾಗಿಯೂ ದೈನಂದಿನ ನಷ್ಟವನ್ನು ಅನುಭವಿಸುತ್ತಿದ್ದೇವೆ ”ಎಂದು ಅವರು ಹೇಳುತ್ತಾರೆ.

ನಾನುಕುಟುಂಬದಲ್ಲಿ ದುಡಿಯುವ ಏಕೈಕ ಸದಸ್ಯ, ಕನಿಷ್ಠ ಈಗ ಸಂಪಾದಿಸುತ್ತಿದ್ದೇನೆ. ಮನೆಯಲ್ಲಿ ಕುಳಿತು ಏನನ್ನೂ ಮಾಡದೆ ಇರುವುದು ಸಾಧ್ಯವಿಲ್ಲ.ಅಂಗಡಿಬಾಡಿಗೆ ಪಾವತಿಸಬೇಕಾಗಿದೆ. ನನ್ನ ತಾಯಿ ಮತ್ತು ನಿಧನರಾದ ನನ್ನ ಕಿರಿಯ ಸಹೋದರನ ಕುಟುಂಬವನ್ನು ನಾನೇ ನೋಡಿಕೊಳ್ಳಬೇಕು ಎಂದು ಹುಕುಮ್ ಚಂದ್ ತಮ್ಮ ಅಳಲು ತೋಡಿಕೊಳ್ಳುತ್ತಾರೆ.

ಪ್ರಸ್ತುತ ಹುಕುಮ್ ಚಂದ್ ತರಕಾರಿಗಳನ್ನು ಖರೀದಿಸಲು ಪ್ರತಿದಿನ ಸ್ಥಳೀಯ ಮಂಡಿಗೆ ಹೋಗುತ್ತಾರೆ, ಅಲ್ಲಿ ತರಕಾರಿ ಖರೀದಿಸಿಟೆಂಪೊ ಬಾಡಿಗೆಗೆ ಪಡೆದು ತಮ್ಮ ಅಂಗಡಿಗೆಸಾಗಿಸಿ ಪ್ರತಿದಿನದ ಸಂಸಾರ ತೂಗಿಸುವುದಾಗಿ ಆತ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT