ಶನಿವಾರ, ಸೆಪ್ಟೆಂಬರ್ 19, 2020
26 °C

ಮಧ್ಯಪ್ರದೇಶ ಪೂರ್ಣ ಫಲಿತಾಂಶ ಪ್ರಕಟ: ಕಾಂಗ್ರೆಸ್‌ಗೆ ಬಹುಮತಕ್ಕೆ 2 ಸ್ಥಾನ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೋಪಾಲ್‌: ತೂಗುಯ್ಯಾಲೆ ಸ್ಥಿಯಲ್ಲಿದ್ದ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯ ಪೂರ್ಣ ಫಲಿತಾಂಶ ಪ್ರಕಟವಾಗಿದ್ದು, ಹೆಚ್ಚು ಸ್ಥಾನ ಪಡೆದಿರುವ ಕಾಂಗ್ರೆಸ್‌ಗೆ ಸರ್ಕಾರ ರಚನೆಗೆ ಇನ್ನೂ ಎರಡು ಸ್ಥಾನ ಕೊರತೆ ಇದೆ.

ಪೂರ್ಣ ಫಲಿತಾಂಶವನ್ನು ಚುನಾವಣಾ ಆಯೋಗ ಬುಧವಾರ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಕಾಂಗ್ರೆಸ್‌ 114 ಸ್ಥಾನ, ಬಿಜೆಪಿ 109 ಸ್ಥಾನ, ಸಮಾಜವಾದಿ ಪಾರ್ಟಿ(ಎಸ್ಪಿ) 1, ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ) 2, ಪಕ್ಷೇತರರು 4 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.

ಒಟ್ಟು 230 ಸದಸ್ಯರ ಸಂಖ್ಯಾಬಲದ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 116 ಸ್ಥಾನಗಳ ಬಹುಮತ ಬೇಕು. ಹೆಚ್ಚು ಸ್ಥಾನ(114) ಗಳಿಸಿರುವ ಕಾಂಗ್ರೆಸ್‌ಗೆ ಎರಡು ಸ್ಥಾನಗಳ ಕೊರತೆ ಇದೆ. 


ಫಲಿತಾಂಶ ಚುನಾವಣಾ ವೆಬ್‌ಸೈಟ್‌ನಿಂದ

ಬಿಜೆಪಿ 114 ಸ್ಥಾನಗಳನ್ನು ಗಳಿಸಲಷ್ಟೇ ಸಾಧ್ಯವಾಗಿದೆ.

ಮಂಗಳವಾರ ತಡರಾತ್ರಿವರೆಗೂ ಫಲಿತಾಂಶ ಪ್ರಕಟವಾಗಿರಲಿಲ್ಲ. ಈ ನಡುವೆ ತಡರಾತ್ರಿಯೇ ಕಾಂಗ್ರೆಸ್‌ನ ಮುಖಂಡರು ರಾಜ್ಯಪಾಲರಿಗೆ ಪತ್ರ ಬರೆದು ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಕೋರಿದ್ದರು.

* ಇವನ್ನೂ ಓದಿ...

ಮಧ್ಯಪ್ರದೇಶ: ಫಲಿತಾಂಶಕ್ಕೂ ಮುನ್ನ ತಡರಾತ್ರಿ ರಾಜ್ಯಪಾಲರಿಗೆ ಕಾಂಗ್ರೆಸ್ ಪತ್ರ

ಮುದುಡಿದ ತಾವರೆ, ‘ಕೈ’ಗೆ ಆಸರೆ​

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು