ಸೋಮವಾರ, ಜೂನ್ 21, 2021
27 °C

ಹಿಂದುತ್ವ ಸಿದ್ದಾಂತ ತೊರೆಯುವುದಿಲ್ಲ: ಮಹಾರಾಷ್ಟ್ರ ಸಿಎಂ ಉದ್ದವ್‌ ಠಾಕ್ರೆ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ಉದ್ದವ್‌ ಠಾಕ್ರೆ ಅವರು ಹಿಂದುತ್ವ ಸಿದ್ದಾಂತವನ್ನು ತೊರೆಯುವುದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಶಿವಸೇನಾ ಹಿಂದುತ್ವ ಸಿದ್ದಾಂತದಿಂದ ದೂರ ಸರಿಯುತ್ತಿದೆಯಾ ಎಂಬ ಪ್ರಶ್ನೆಗೆ ಅವರು ಸ್ಪಷ್ಟನೆ ನೀಡಿದ್ದಾರೆ‌. ಇದೇ ವೇಳೆ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಜೊತೆಗಿನ ಸ್ನೇಹವು ಸದಾ ಕಾಲ ಇರಲಿದೆ ಎಂದು ತಿಳಿಸಿದ್ದಾರೆ. 

‘ದೇವೇಂದ್ರ ಫಡಣವೀಸ್‌ ಅವರಿಂದ ಬಹಳ ಕಲಿತಿದ್ದೇನೆ. ನಾವಿಬ್ಬರು ಸ್ನೇಹಿತರಾಗಿ ಇರಲಿದ್ದೇವೆ. ನಾನು ಈಗಲೂ ಹಿಂದುತ್ವ ಸಿದ್ದಾಂತದೊಂದಿಗೆ ಇದ್ದೇನೆ. ಅದನ್ನು ತೊರೆಯುವ ಪ್ರಶ್ನೆಯೇ ಇಲ್ಲ. ಈ ಹಿಂದೆ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಸರ್ಕಾರವನ್ನು ನಾನು ವಂಚಿಸಿಲ್ಲ,’ ಎಂದು ಉದ್ದವ್ ಠಾಕ್ರೆ ಹೇಳಿದ್ದಾರೆ. 

‘ದೇವೇಂದ್ರ ಫಡಣವೀಸ್‌ ಅವರನ್ನು ನಾನು ವಿರೋಧ ಪಕ್ಷದ ನಾಯಕನೆಂದು ಪರಿಗಣಿಸುವುದಿಲ್ಲ. ಆದರೆ, ಅವರನ್ನು ಜವಾಬ್ದಾರಿಯುತ ನಾಯಕ ಎಂದು ಹೇಳಲು ಬಯಸುತ್ತೇನೆ,’ ಎಂದಿದ್ದಾರೆ.

‘ನೀವು ನಮ್ಮ ಜೊತೆ ಸರಿಯಾಗಿ ನಡೆದುಕೊಂಡಿದ್ದರೆ, ನಮ್ಮ ಮೈತ್ರಿ ಮುರಿಯುತ್ತಿರಲಿಲ್ಲ,’ ಎಂದು ಫಡಣವೀಸ್‌ ಅವರನ್ನು ಉದ್ದೇಶಿಸಿ ಮಾತನಾಡಿದ್ದಾರೆ. 

ವಿರೋಧ ಪಕ್ಷದ ನಾಯಕರಾಗಿ ದೇವೇಂದ್ರ ಫಡಣವೀಸ್‌ ಆಯ್ಕೆ

ಮಾಜಿ ಮುಖ್ಯಮಂತ್ರಿ ಫಡಣವೀಸ್‌ ಅವರು ಮಹಾರಾಷ್ಟ್ರ ವಿಧಾನಸಭಾ ವಿರೋಧ ಪಕ್ಷದ ನಾಯಕರಾಗಿ ಚುನಾಯಿತರಾಗಿದ್ದಾರೆ. ಕಾಂಗ್ರೆಸ್‌ ಶಾಸಕ ನಾನಾ ಪಟೋಲೆ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು