ಮಲೇರಿಯಾ ನಿರೋಧಕ ಹೈಡ್ರಾಕ್ಸಿಕ್ಲೊರೊಕ್ವಿನ್ ಮಾತ್ರೆಗಳನ್ನು ರಫ್ತು ಮಾಡದಿದ್ದರೆ ಪ್ರತೀಕಾರ ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬೆದರಿಕೆ ಹಾಕಿದ ನಂತರ, ಈ ಮಾತ್ರೆ ಹೆಚ್ಚು ಸುದ್ದಿಯಾಗುತ್ತಿದೆ. ಅಮೆರಿಕದ ಬೆದರಿಕೆಯ ಬೆನ್ನಲ್ಲೇ ಈ ಮಾತ್ರೆಗಳ ಮೇಲಿದ್ದ ರಫ್ತು ನಿಷೇಧವನ್ನು ಭಾರತ ತೆರವು ಮಾಡಿದೆ. ಭಾರತಕ್ಕೆ ಅಗತ್ಯವಿರುವಷ್ಟು ಮಾತ್ರೆಗಳು ಲಭ್ಯವಿವೆ ಎಂದು ತಯಾರಕ ಕಂಪನಿಗಳು ಹೇಳಿವೆ. ಆದರೆ, ಈ ಮಾತ್ರೆಗಳ ತಯಾರಿಕೆಗೆ ಅಗತ್ಯವಿರುವ ಕಚ್ಚಾ ಪದಾರ್ಥಗಳು ಭಾರತಕ್ಕೆ ಚೀನಾದಿಂದ ಆಮದು ಆಗಬೇಕಿದೆ. ಕೋವಿಡ್–19 ಪಿಡುಗಿಗೆ ಈ ಮಾತ್ರೆ ಬಳಸಬಹುದು ಎಂದು ಜನರು ಅವುಗಳ ಸಂಗ್ರಹಕ್ಕೆ ಮುಂದಾದರೆ ತೊಡಕು ಎದುರಾಗಲಿದೆ

ಔಷಧಿ ತಯಾರಿಕಾ ಸಾಮರ್ಥ್ಯ ಮತ್ತು ಆಮದು ತೊಡಕು

‘ನಮಗೆ ಅಗತ್ಯವಿರುವಷ್ಟೂ ಮಾತ್ರೆಗಳ ಸಂಗ್ರಹ ನಮ್ಮಲ್ಲಿದೆ. ಅಮೆರಿಕವೂ ಸೇರಿದಂತೆ ಈ ಮಾತ್ರೆಗಳ ಅಗತ್ಯವಿರುವ ದೇಶಗಳಿಗೆ ರಫ್ತು ಮಾಡಲಾಗುತ್ತದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಭಾರತದಲ್ಲಿ ಈಗ ಅಗತ್ಯವಿರುವಷ್ಟು ಮಾತ್ರೆಗಳ ಸಂಗ್ರಹವಿದೆ, ತಯಾರಿಕೆಯನ್ನು ಹೆಚ್ಚಿಸಲೂ ಅವಕಾಶವಿದೆ ಎಂಬುದನ್ನು ಭಾರತೀಯ ಔಷಧ ಉತ್ಪಾದಕರ ಒಕ್ಕೂಟವು ದೃಢಪಡಿಸಿದೆ.

ಭಾರತದ ಮೂರು ಕಂಪನಿಗಳು ಈ ಮಾತ್ರೆಯನ್ನು ತಯಾರಿಸುತ್ತಿವೆ. ಪ್ರತಿ ತಿಂಗಳು 20 ಕೋಟಿ ಮಾತ್ರೆಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಭಾರತದ ಕಂಪನಿಗಳು ಹೊಂದಿವೆ. ಆದರೆ, ಅಗತ್ಯವಿರುವಷ್ಟು ಮಾತ್ರೆಗಳನ್ನು ತಯಾರಿಸಲು ಬೇಕಿರುವ ‘ಔಷಧೀಯ ಪದಾರ್ಥಗಳು’ (ಎಪಿಐ) ಸಂಗ್ರಹವಿದೆಯೇ ಎಂಬುದು ಬಹಿರಂಗವಾಗಿಲ್ಲ.

ಆದರೆ, ಈ ಮಾತ್ರೆಗಳ ತಯಾರಿಕೆಗೆ ಬೇಕಿರುವಎಪಿಐಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಬೇಕಿದೆ. ಭಾರತದ ಕಂಪನಿಗಳು ಈ ಮಾತ್ರೆಗೆ ಅವಶ್ಯವಿರುವ ಎಪಿಐಗಳಲ್ಲಿ ಶೇ 71ರಷ್ಟು
ಪದಾರ್ಥಗಳಿಗಾಗಿ ಚೀನಾವನ್ನೇ ಅವಲಂಭಿಸಿವೆ. ಈಗ ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಈ ವಸ್ತುಗಳನ್ನು ಆಮದು ಮಾಡಿಕೊಳ್ಳುವುದು ಅನಿಶ್ಚಿತವಾಗಿದೆ.

2 ದಿನಕ್ಕೆಒಂದು ಮಾತ್ರೆಯನ್ನು ನೀಡಲಾಗುತ್ತದೆ

14ಒಬ್ಬ ವ್ಯಕ್ತಿಗೆ ಅಗತ್ಯವಿರುವ ಮಾತ್ರೆಗಳು

10 ಕೋಟಿಮಾತ್ರೆಗಳ ಖರೀದಿಗೆ ಸರ್ಕಾರವು ಆದೇಶ ನೀಡಿದೆ

71 ಲಕ್ಷ ಜನರಿಗೆ ಇಷ್ಟು ಮಾತ್ರೆಗಳಿಂದ ಚಿಕಿತ್ಸೆ ನೀಡಲು ಸಾಧ್ಯವಿದೆ

*ಮಲೇರಿಯಾ ನಿರೋಧಕಹೈಡ್ರಾಕ್ಸಿ ಕ್ಲೊರೊಕ್ವಿನ್ ಮಾತ್ರೆಗಳನ್ನು ಅತಿಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವ ದೇಶ ಭಾರತ

*ಮಲೇರಿಯಾ ಸಂಪೂರ್ಣ ನಿರ್ಮೂಲನೆ ಆಗಿರುವ ಕಾರಣ ಐರೋಪ್ಯ ರಾಷ್ಟ್ರಗಳು ಮತ್ತು ಅಮೆರಿಕವು ಈ ಮಾತ್ರೆಗಳನ್ನು ಉತ್ಪಾದಿಸುವುದಿಲ್ಲ

*ಈಗ ಕೋವಿಡ್–19 ನಿಯಂತ್ರಣಕ್ಕೆ ಈ ಮಾತ್ರೆ ಸಹಕಾರಿ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದಕ್ಕೂ ಮುನ್ನವೇ ಅಮೆರಿಕದ ‘ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್–ಎಫ್ಡಿಎ’ ಈ ಮಾತ್ರೆಗಳಿಗಾಗಿ, ಭಾರತದ ಕಂಪನಿಗಳನ್ನು ಸಂಪರ್ಕಿಸಿತ್ತು. ಮುಂಗಡವನ್ನೂ ಪಾವತಿಸಿತ್ತು

*ಕೋವಿಡ್–19 ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಮುನ್ನೆಚ್ಚರಿಕೆಯಾಗಿ ಈ ಮಾತ್ರೆಗಳನ್ನು ನೀಡಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನೆಗಳ ಮಂಡಳಿ (ಐಸಿಎಂಆರ್) ಶಿಫಾರಸು ಮಾಡಿತ್ತು

*ಇದರ ಬೆನ್ನಲ್ಲೇ, ಭಾರತ ಸರ್ಕಾರವು ಇಂತಹ 10 ಕೋಟಿ ಮಾತ್ರೆಗಳನ್ನು ಖರೀದಿಸಲು ಮುಂದಾಯಿತು. ಇದಕ್ಕಾಗಿ ಎರಡು ಕಂಪನಿಗಳಿಗೆ ಗುತ್ತಿಗೆಯನ್ನೂ ನೀಡಿತು. ಈ ಮಾತ್ರೆಗಳ ರಫ್ತನ್ನೂ ನಿಷೇಧಿಸಿತು

*ಅಮೆರಿಕವು ಈ ಮೊದಲೇ ಖರೀದಿಸಿದ್ದ ಮಾತ್ರೆಗಳ ರಫ್ತೂ ಸ್ಥಗಿತವಾಯಿತು. ಇದು ಅಮೆರಿಕದ ಸಿಟ್ಟಿಗೆ ಕಾರಣವಾಯಿತು

ಆಧಾರ: ಪಿಟಿಐ, ಬಿಬಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.