ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ 1ರಂದು ದಕ್ಷಿಣ ಕರಾವಳಿಯಿಂದ ಭಾರತಕ್ಕೆ ಮುಂಗಾರು ಪ್ರವೇಶ: ಹವಾಮಾನ ಇಲಾಖೆ

Last Updated 28 ಮೇ 2020, 12:42 IST
ಅಕ್ಷರ ಗಾತ್ರ

ನವದೆಹಲಿ: ದಕ್ಷಿಣ ಕರಾವಳಿ ಭಾಗದಿಂದ ಮುಂಗಾರು ಮಾರುತ ಜೂನ್‌ 1ರಂದು ಭಾರತ ಪ್ರವೇಶಿಸುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಗುರುವಾರ ತಿಳಿಸಿದೆ. ಕೃಷಿ ಆಧಾರಿತ ಆರ್ಥಿಕ ವ್ಯವಸ್ಥೆಯಾಗಿರುವ ದೇಶಕ್ಕೆ ನಾಲ್ಕು ತಿಂಗಳ ಮಳೆಗಾಲದ ಅವಧಿಗೆ ಪ್ರಾಮುಖ್ಯತೆ ಇದೆ.

ಬೇಸಿಗೆಯ ಬಿಸಿಲಿನಿಂದ ಮಳೆಗಾಲಕ್ಕೆ ಹೊರಳುವ ಪೂರಕ ವಾತಾವರಣ 2020ರ ಜೂನ್‌ 1ರಿಂದ ಸೃಷ್ಟಿಯಾಗಲಿದ್ದು, ಕೇರಳ ಕರಾವಳಿಯಿಂದ ಮುಂಗಾರು ಮಾರುತ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಕೇರಳದಲ್ಲಿ ಜೂನ್‌ 5ರಿಂದ ಮುಂಗಾರು ಮಾರುತ ಪ್ರವೇಶಿಸಲಿದೆ ಎಂದು ಈ ಹಿಂದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ಭಾರತದ ಅರ್ಧದಷ್ಟು ಕೃಷಿ ಭೂಮಿ ಬೆಳೆಗಾಗಿ ಜೂನ್‌–ಸೆಪ್ಟೆಂಬರ್‌ ಮಳೆಯನ್ನೇ ನೆಚ್ಚಿಕೊಂಡಿದೆ. ಈ ಕೃಷಿ ಭೂಮಿಗೆ ನೀರಾವರಿ ವ್ಯವಸ್ಥೆ ಇಲ್ಲ. ಮಳೆಯಾದರೆ ಭತ್ತ, ಜೋಳ, ಕಬ್ಬು, ಹತ್ತಿ ಹಾಗೂ ಸೋಯಾಬಿನ್‌ ಬೆಳೆಯಲು ಸಾಧ್ಯವಾಗುತ್ತದೆ.

ಕಳೆದ ತಿಂಗಳು ಹವಾಮಾನ ಇಲಾಖೆ, ದೇಶದಲ್ಲಿ ಮುಂಗಾರು ಮಳೆ ಸಾಧಾರಣವಾಗಿರಲಿದೆ ಎಂದು ಹೇಳಿತ್ತು. ಇದರಿಂದ ಹೆಚ್ಚು ಬೆಳೆಯ ನಿರೀಕ್ಷೆ ಉಂಟಾಗಿದೆ. ಕೋವಿಡ್‌–19 ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟದಲ್ಲಿರುವ ದೇಶದ ಆರ್ಥಿಕತೆಗೆ ಉತ್ತಮ ಬೆಳೆ ಚೇತರಿಕೆ ನೀಡಬಹುದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT