ಭಾನುವಾರ, ಆಗಸ್ಟ್ 1, 2021
28 °C

ವರ್ಸೋವಾ ಕಡಲ ಕಿನಾರೆಯತ್ತ ನಿಸರ್ಗ ಚಂಡಮಾರುತ: ಎಲ್ಲೆಡೆ ಹೈ ಅಲರ್ಟ್

ಎಎನ್‌ಐ Updated:

ಅಕ್ಷರ ಗಾತ್ರ : | |

NDRF

ಮುಂಬೈ: ನಿಸರ್ಗ ಚಂಡಮಾರುತ ಮಹಾರಾಷ್ಟ್ರದ ಕಡಲ ತೀರದತ್ತ ಧಾವಿಸಿದೆ. ಇಲ್ಲಿ ಬಿರುಸಿನ ಗಾಳಿ ಬೀಸುತ್ತಿದ್ದು ರತ್ನಗಿರಿ ಪ್ರದೇಶದಲ್ಲಿ ಮಳೆಯಾಗಿದೆ. ರತ್ನಗಿರಿಯಲ್ಲಿ ಬುಧವಾರ ಬೆಳಗ್ಗೆ 9.30ರ ಹೊತ್ತಿಗೆ  ಪ್ರತಿ ಗಂಟೆಗೆ 59 ಕಿಮೀ ವೇಗದಲ್ಲಿ ಗಾಳಿ ಬೀಸಿದೆ. ಇದು ಮತ್ತಷ್ಟು ತೀವ್ರತೆ ಪಡೆದು ಉತ್ತರ ಕೊಂಕಣ ತೀರಕ್ಕೆ ಸಾಗಿದೆ.

ಮುಂಬೈಯ ವರ್ಸೋವಾ ಕಡಲ ಕಿನಾರೆಯಲ್ಲಿ ರಭಸದಿಂದ ಗಾಳಿ ಬೀಸಿ ತೀವ್ರ  ಸ್ವರೂಪ ಪಡೆದಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ನಿಸರ್ಗ ಚಂಡಮಾರುತವು ಮಧ್ಯಾಹ್ನ 1- 3ಗಂಟೆಯ ನಡುವೆ ಅಲೀಭಾಗ್ (ರಾಯ್‌ಗಢ)  ಮೂಲಕ ಹಾದುಹೋಗಲಿದೆ. 

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಬೃಹನ್ಮುಂಬೈ ನಗರ ಪಾಲಿಕೆ ಜಂಟಿಯಾಗಿ ವರ್ಸೋವಾ ಕಡಲ ತೀರ ಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಿದ್ದಾರೆ.

Around 40000 people have been evacuated to safer places till now from various locations (sea belt areas) of Maharashtra: Anup Shrivastava, Commandant NDRF (National Disaster Response Force). #CycloneNisarga https://t.co/DlTxYwGMyd

— ANI (@ANI) June 3, 2020

ಇಂದು ಮಧ್ಯಾಹ್ನದ ಹೊತ್ತಿಗೆ ನಿಸರ್ಗ ಚಂಡಮಾರುತವು ರಾಯ್‌ಗಢ ಜಿಲ್ಲೆಯ ಅಲೀಭಾಗ್‌ಗೆ ಅಪ್ಪಳಿಸಲಿದೆ.

ಇದನ್ನೂ ಓದಿ: ಮುಂಬೈಗೆ ‘ನಿಸರ್ಗ’ ಭೀತಿ | ಕೋವಿಡ್ ಬಿಕ್ಕಟ್ಟಿನ ಮಧ್ಯೆ ಚಂಡಮಾರುತದ ಸವಾಲು


ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು