ಮಂಗಳವಾರ, ಸೆಪ್ಟೆಂಬರ್ 21, 2021
27 °C

ಕಾಂಗ್ರೆಸ್‌ ನನ್ನನ್ನು ಮುಗಿಸುವ ಕನಸು ಕಾಣುತ್ತಿದೆ: ನರೇಂದ್ರ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾಂಗ್ರೆಸ್ ಪಕ್ಷ ತನ್ನನ್ನು ಹತ್ಯೆ ಮಾಡುವ ಕನಸು ಕಾಣುತ್ತಿದೆ ಆದರೆ ಇಡೀ ದೇಶ ತನ್ನೊಂದಿಗೆ ನಿಂತಿದೆ ಎಂದು ಮಧ್ಯಪ್ರದೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಧ್ಯಪ್ರದೇಶದಲ ಇತಾರ್ಸಿಯಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ವಿವಾದಿತ ಭಾಷಣಕಾರ ಜಕೀರ್ ನಾಯಕ್ ಜತೆ ಕಾಂಗ್ರೆಸ್ ಪಕ್ಷದ ನಾಯಕ ದಿಗ್ವಿಜಯ್ ಸಿಂಗ್ ವೇದಿಕೆ ಹಂಚಿಕೊಂಡಿದ್ದ ವಿಡಿಯೊ ನೋಡಿದ್ದೇನೆ. ಡೂಬ್ ಮರೋ ಕಾಂಗ್ರೆಸ್‌ವಾಲೋ (ಬಿದ್ದು ಸಾಯಿರಿ) ಎಂದಿದ್ದಾರೆ.

ಕಾಂಗ್ರೆಸ್‌ಗೆ ನನ್ನ ಮೇಲೆ ತುಂಬಾ ದ್ವೇಷ ಇದೆ. ಅವರು ನನ್ನನ್ನು ಕೊಲ್ಲುವ ಕನಸನ್ನೂ ಕಾಣುತ್ತಿದ್ದಾರೆ. ಆದರೆ ಮಧ್ಯಪ್ರದೇಶ ಮತ್ತು ಇಡೀ ದೇಶದ ಜನರು ನನ್ನೊಂದಿಗೆ ಇದ್ದಾರೆ ಎಂಬುದನ್ನು ಅವರು ಮರೆತಿದ್ದಾರೆ ಎಂದು ಹೇಳಿದ್ದಾರೆ ಮೋದಿ.

ಭೋಪಾಲದಲ್ಲಿ ಚುನಾವಣೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮೇಲೆ ಕಿಡಿಕಾರಿದ ಅವರು, ಡಿಗ್ಗಿ ರಾಜಾ ಜಕೀರ್ ನಾಯಕ್‍ನ್ನು ಹೆಗಲ ಮೇಲೆ ಕುಳ್ಳಿರಿಸಿ ನೃತ್ಯ ಮಾಡಿದ್ದಾರೆ. ಭಯೋತ್ಪಾದನೆ ಬಗ್ಗೆ ಪೊಲೀಸ್ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಲು ಕಾಂಗ್ರೆಸ್ ಸರ್ಕಾರ ನಾಯಕ್‌ನ್ನು ಕರೆಸಿತ್ತು. ಸ್ಫೋಟ ನಂತರ ಶ್ರೀಲಂಕಾ ಆತನ ಟಿವಿ ವಾಹಿನಿಯನ್ನೇ ನಿಲ್ಲಿಸಿದೆ ಆದರೆ ಈ ಹಿಂದಿನ ಸರ್ಕಾರ ನಾಯಕ್‌ನ್ನು ಶಾಂತಿದೂತ ಎಂದು ಬಿಂಬಿಸಲು ಯತ್ನಿಸಿತ್ತು.

ಈ ಬಾರಿಯ ಚುನಾವಣೆಯಲ್ಲಿ ಮತದಾರರು 55 ವರ್ಷದ ಕುಟುಂಬ ರಾಜಕಾರಣವನ್ನು ಅಥವಾ 55 ತಿಂಗಳುಗಳ ಚಾಯ್‌ವಾಲಾನ ಅಧಿಕಾರವನ್ನು ಆಯ್ಕ ಮಾಡಬೇಕಿದೆ. ನಿಮ್ಮ ಒಂದೊಂದು ಮತವೂ ಭಯೋತ್ಪಾದನೆಗೆ ಅಂತ್ಯ ಹಾಡಲಿದೆ ಎಂದಿದ್ದಾರೆ ಮೋದಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು