ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾದಳ ಪಕ್ಷವು (ಬಿಜೆಡಿ)ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿದೆ. ಇದು ದೇಶದಲ್ಲೇ ಮೊದಲು.

ಮಿಷನ್ ಶಕ್ತಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸ್ವಯಂ ಸೇವಾ ಸಂಘ ಉದ್ದೇಶಿಸಿ ಮಾತನಾಡಿದ ಪಟ್ನಾಯಕ್, ಪ್ರಸಿದ್ಧ ಬಿಜು ಬಾಬು ಅವರ ಕರ್ಮಭೂಮಿಯಾದ ಕೇಂದ್ರಪರಾದಲ್ಲಿ ಮಹಿಳಾ ಮೀಸಲಾತಿ ವಿಚಾರ ಘೋಷಿಸಲು ಸಂತಸವಾಗುತ್ತಿದೆ ಎಂದಿದ್ದಾರೆ.

ದೇಶದ ಮಹಿಳಾ ಸಬಲೀಕರಣದ ಹಾದಿಯಲ್ಲಿ ಒಡಿಶಾದ ಮಹಿಳೆಯರು ಮುಂದಿದ್ದಾರೆ. ಭಾರತ ಪ್ರಪಂಚದಲ್ಲಿ ಮುನ್ನಡೆ ಸಾಧಿಸಬೇಕೆಂದಿದ್ದರೆ, ಅಮೆರಿಕ ಹಾಗೂ ಚೀನಾಗಳಿಗೆಸಮನಾಗಿಮುಂದುವರಿಯಬೇಕೆಂದಿದ್ದರೆ ಮಹಿಳಾ ಸಬಲೀಕರಣ ಅಗತ್ಯ ಎಂದು ನವೀನ್ ಪಟ್ನಾಯಕ್ ಅಭಿಪ್ರಾಯಪಟ್ಟಿದ್ದಾರೆ.

ಕೊಟ್ಟ ಭರವಸೆ ಉಳಿಸಿಕೊಳ್ಳುವುದಾದಲ್ಲಿ, ಚುನಾವಣೆ ಸಂದರ್ಭಗಳಲ್ಲಿ ಪ್ರಚಾರ ಮಾಡುವ ಮಹಿಳಾ ಸಬಲೀಕರಣ ಅಂಶವನ್ನು ಜಾರಿಗೆ ತರಲು ಶ್ರಮಿಸಿ ಎಂದೂ ಅವರು ರಾಷ್ಟ್ರೀಯ ಪಕ್ಷಗಳಿಗೆ ಕರೆ ಕೊಟ್ಟಿದ್ದಾರೆ.

ಜೊತೆಗೆ ಕೇಂದ್ರಪರಾದಲ್ಲಿರುವ ಮಿಷನ್ ಶಕ್ತಿ ಭವನಕ್ಕೆ ₹1ಕೋಟಿ ಅನುದಾನ ಘೋಷಿಸಿದ್ದಾರೆ.

ಸಂಸತ್ತು ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರ ಮೀಸಲಾತಿ ನೀಡುವ ಪ್ರಸ್ತಾವಕ್ಕೆ 2018ರ ನವೆಂಬರ್ನಲ್ಲಿಯೇ ಪಟ್ನಾಯಕ್ ಸರ್ಕಾರಅನುಮೋದನೆ ಪಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.