ನೀರವ್‌ ಅಕ್ರಮ ಬಂಗಲೆ ನೆಲಸಮಕ್ಕೆ ಕ್ರಮ: ಮಹಾರಾಷ್ಟ್ರ

7

ನೀರವ್‌ ಅಕ್ರಮ ಬಂಗಲೆ ನೆಲಸಮಕ್ಕೆ ಕ್ರಮ: ಮಹಾರಾಷ್ಟ್ರ

Published:
Updated:
Deccan Herald

ಮುಂಬೈ: ಬಹುಕೋಟಿ ವಂಚನೆ ಪ್ರಕರಣದ ಆರೋಪಿ, ಚಿನ್ನಾಭರಣ ಉದ್ಯಮಿ ನೀರವ್‌ ಮೋದಿಗೆ ಸೇರಿದ ಅಕ್ರಮ ಬಂಗಲೆಯನ್ನು ನೆಲಸಮಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್‌ಗೆ ಶುಕ್ರವಾರ ಹೇಳಿದೆ. 

ರಾಯಗಡ ಜಿಲ್ಲೆಯ ಅಲಿಬಾಗ್‌ ಬೀಚ್‌ ಬಳಿಯ ಈ ಬಂಗಲೆಯನ್ನು ರಾಜ್ಯ ಸರ್ಕಾರ ಮತ್ತು ಕರಾವಳಿ ವಲಯ ನಿಯಮಗಳಿಗೆ ವಿರುದ್ಧವಾಗಿ ಕಟ್ಟಲಾಗಿದ್ದು ಅದನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಗುವುದು ಎಂದು ಸರ್ಕಾರದ ಪರ ವಕೀಲ ಪಿ.ಬಿ. ಕಾಕಡೆ, ಮುಖ್ಯನ್ಯಾಯಮೂರ್ತಿ ನರೇಶ್‌ ಪಾಟೀಲ ಮತ್ತು ನ್ಯಾಯಮೂರ್ತಿ ಎಂ.ಎಸ್. ಕಾರ್ನಿಕ್‌ ಅವರನ್ನೊಳಗೊಂಡ ಪೀಠಕ್ಕೆ ಹೇಳಿದರು. 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !