ವೇದಿಕೆಯಲ್ಲಿ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

7

ವೇದಿಕೆಯಲ್ಲಿ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

Published:
Updated:

ಮುಂಬೈ: ಮಹಾರಾಷ್ಟ್ರದ ಅಹಮದ್‍ನಗರದಲ್ಲಿ ನಡೆದ ಕಾರ್ಯಕ್ರಮದ ವೇಳೆ ವೇದಿಕೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಕುಸಿದು ಬಿದ್ದಿದ್ದಾರೆ.
ಕುಸಿದು ಬೀಳುತ್ತಿದ್ದಂತ ವೇದಿಕೆಯಲ್ಲಿದ್ದ ಮಹಾರಾಷ್ಟ್ರ ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್, ಗಡ್ಕರಿ ಅವರನ್ನು ಹಿಡಿದುಕೊಂಡಿದ್ದಾರೆ.

ತಕ್ಷಣವೇ ಗಡ್ಕರಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯಕೀಯ ತಪಾಸಣೆ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಅಲ್ಲಿಂದ ಗಡ್ಕರಿ ಶಿರಡಿಗೆ ಹೋಗಿದ್ದಾರೆ.
 ಶುಕ್ರವಾರ ಮಧ್ಯಾಹ್ನ ಮಹಾತ್ಮ ಫುಲೆ ಕೃಷಿ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಭಾಗವಹಿಸಿದ್ದ ಗಡ್ಕರಿ, ತಮ್ಮ ಭಾಷಣ ಮುಗಿಸಿ ಕುಳಿತುಕೊಂಡಿದ್ದರು.  ಆಮೇಲೆ ರಾಷ್ಟ್ರಗೀತೆಗಾಗಿ ನಿಂತುಕೊಂಡಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ಆರೋಗ್ಯ ಸ್ಥಿರ ಎಂದು ಟ್ವೀಟಿಸಿದ ಗಡ್ಕರಿ
ಲೋ ಶುಗರ್‌ನಿಂದಾಗಿ ಅಸ್ವಸ್ಥನಾಗಿದ್ದೆ,  ವೈದ್ಯರನ್ನು ಭೇಟಿ ಮಾಡಿದ್ದು, ನಾನೀಗ ಆರಾಮವಾಗಿದ್ದೇನೆ. ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು ಗಡ್ಕರಿ ಟ್ವೀಟಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 7

  Sad
 • 1

  Frustrated
 • 1

  Angry

Comments:

0 comments

Write the first review for this !