ಸೋಮವಾರ, ಏಪ್ರಿಲ್ 19, 2021
31 °C

ಇನ್‌ಸ್ಟಾಗ್ರಾಂನಲ್ಲಿ 3 ಕೋಟಿ ಫಾಲೋವರ್‌ಗಳನ್ನು ಗಳಿಸಿದ ಮೊದಲ ಜಾಗತಿಕ ನಾಯಕ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಇನ್‌ಸ್ಟಾಗ್ರಾಂ ಫಾಲೊವರ್ಸ್‌ ಸಂಖ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರನ್ನು ಹಿಂದಿಕ್ಕಿದ್ದಾರೆ. ಮೋದಿ ಅವರ ಫಾಲೊವರ್ಸ್‌ ಸಂಖ್ಯೆ ಮೂರು ಕೋಟಿ ದಾಟಿದೆ.

‘ಇನ್‌ಸ್ಟಾಗ್ರಾಂನಲ್ಲಿ  ಮೋದಿ ಅವರು ಟ್ರಂಪ್‌ ಹಾಗೂ ಒಬಾಮ ಅವರನ್ನು ಹಿಂದಿಕ್ಕಿದ್ದಾರೆ. ಮೋದಿ ಅವರ ಜನಪ್ರಿಯತೆ ಹೆಚ್ಚುತ್ತಿದೆ, ಯುವಜನರ ಜೊತೆಗೆ ಅವರು ನಿರಂತರ ಸಂಪರ್ಕದಲ್ಲಿರುತ್ತಾರೆ ಎಂಬುದಕ್ಕೆ ಇದು ಇನ್ನೊಂದು ಸಾಕ್ಷಿಯಾಗಿದೆ’ ಎಂದು ಬಿಜೆಪಿಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಭಾನುವಾರ ಟ್ವೀಟ್‌ ಮಾಡಿದ್ದಾರೆ. ಟ್ವಿಟರ್‌ನಲ್ಲಿ ಮೋದಿ ಅವರಿಗೆ 5.7 ಕೋಟಿ ಹಾಗೂ ಫೇಸ್‌ಬುಕ್‌ನಲ್ಲಿ 4.44 ಕೋಟಿ ಫಾಲೊವರ್ಸ್‌ ಇದ್ದಾರೆ.

ಪ್ರಸಕ್ತ ಒಬಾಮಾ ಅವರು 2.48 ಕೋಟಿ ಹಾಗೂ ಟ್ರಂಪ್‌ ಅವರು 1.49 ಕೋಟಿ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಹೊಂದಿದ್ದಾರೆ.

ಈ ಬಗ್ಗೆ ಮಾಹಿತಿ ಕೇಳಿ ಇನ್‌ಸ್ಟಾಗ್ರಾಂಗೆ ಕಳುಹಿಸಿದ್ದ ಪ್ರಶ್ನೆಗೆ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪ್ರಿಯಾಂಕಾ ಚೋಪ್ರಾ ಅವರಿಗೆ ಭಾರತದಲ್ಲಿ 3.9 ಕೋಟಿ ಫಾಲೊವರ್ಸ್‌ ಇದ್ದು, ಅವರು ಅತಿಹೆಚ್ಚು ಫಾಲೊವರ್ಸ್‌ ಹೊಂದಿರುವ ಭಾರತದ ವ್ಯಕ್ತಿ ಎಂದು ಇನ್‌ಸ್ಟಾಗ್ರಾಂ ಸಂಸ್ಥೆ ಕಳೆದ ಮೇ ತಿಂಗಳಲ್ಲಿ ಹೇಳಿತ್ತು.

ಇನ್ನು ಮೈಕ್ರೋ ಬ್ಲಾಗಿಂಗ್‌ ತಾಣ  ಟ್ವಿಟರ್‌ನಲ್ಲಿ ಮೋದಿ 50.7 ಮಿಲಿಯನ್‌ (5 ಕೋಟಿಗೂ ಹೆಚ್ಚು) ಫಾಲೋವರ್‌ಗಳನ್ನು ಹೊಂದಿದ್ದಾರೆ. 

2018 ಅಂಕಿ ಅಂಕಿ ಸಂಖ್ಯೆಗಳ ಪ್ರಕಾರ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಒಟ್ಟಾರೆ 72 260 000 ಭಾರತೀಯ ಖಾತೆದಾರರಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು