ಬುಧವಾರ, ಜುಲೈ 28, 2021
23 °C

ಸುಶಾಂತ್‌ ಸಿಂಗ್‌ ಆತ್ಮಹತ್ಯೆ ಪ್ರಕರಣ: ‘ವೃತ್ತಿ ವೈರತ್ವ’ದ ನಿಟ್ಟಿನಲ್ಲೂ ತನಿಖೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಆತ್ಮಹತ್ಯೆ ಪ್ರಕರಣವನ್ನು ‘ವೃತ್ತಿಯಲ್ಲಿನ ವೈರತ್ವ’ದ ದಿಕ್ಕಿನಲ್ಲೂ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. 

ಇದನ್ನೂ ಓದಿ:  ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಕುರಿತ ಆಲಿಯಾ ಸಂತಾಪಕ್ಕೆ ಆಕ್ರೋಶ

‘ಸುಶಾಂತ್‌ ಸಿಂಗ್‌ ರಜಪೂತ್‌ ಅವರನ್ನು ಬಾಲಿವುಡ್‌ನ ಕೆಲ ಕೂಟ, ಸ್ವಜನಪಕ್ಷಪಾತದಲ್ಲಿ ತೊಡಗಿರುವ ಕೆಲ ಗುಂಪುಗಳು ತಡೆಯುತ್ತಿದ್ದವು. ಅವು ಮೇಲೆ ಬಾರದಂತೆ ಮಾಡಿದ್ದವು, ಅವರನ್ನು ನಿರ್ಲಕ್ಷಿಸಿದ್ದ ಅದೇ ಗುಂಪು ಇಂದು ಅವರ ಸಾವಿಗೆ ಮಿಡಿಯುತ್ತಿವೆ,’ ಎಂದು ಎರಡು ದಿನಗಳಿಂದಲೂ ಟ್ವಿಟರ್‌ನಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆ ವೇಳೆ #bycottkarnjohrgangmovie,  #KaranJohar, #nepotism,  #boycottbollywoodmovies , #BollywoodBlockedSushant, #nepotisminbollywood, #BoycottNepokids  ಎಂಬ ಹ್ಯಾಷ್‌ ಟ್ಯಾಗ್‌ಗಳು ಟ್ರೆಂಡ್‌ ಆಗುತ್ತಿವೆ. 

ಇದೇ ವಿಚಾರವನ್ನಿಟ್ಟುಕೊಂಡು, ಸುಶಾಂತ್‌ ಸಾವಿಗೆ ಬಾಲಿವುಡ್‌ ಮಂದಿಯ ವೈರತ್ವವೇ ಕಾರಣ ಎಂದು ಕೆಲ ರಾಷ್ಟ್ರೀಯ ಸುದ್ದಿವಾಹಿನಿಗಳು ಸುದ್ದಿ ಪ್ರಸಾರ ಮಾಡಿದ್ದವು. ಹೀಗಾಗಿ, ವೃತ್ತಿಯಲ್ಲಿ ಸುಶಾಂತ್‌ ಎದುರಿಸಿರಬಹುದಾದ ತೊಂದರೆ, ವೈರತ್ವದ ನಿಟ್ಟಿನಲ್ಲಿ ತನಿಖೆ ನಡೆಸುವುದಾಗಿ ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. 

ಈ ಕುರಿತು ಮಾತನಾಡಿರುವ ಮಹಾರಾಷ್ಟ್ರದ ಗೃಹ ಸಚಿವ ಅನಿಲ್‌ ದೇಶಮುಖ್‌, ’ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಮರಣೋತ್ತರ ಪರೀಕ್ಷೆ ವರದಿ ಕೈ ಸೇರಿದೆ. ಅವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಅಂಶ ಸ್ಪಷ್ಟವಾಗಿದೆ. ಆದರೆ, ವೃತ್ತಿಯಲ್ಲಿನ ವೈರತ್ವ ಕಾರಣಕ್ಕೆ ಸುಶಾಂತ್‌ ಖಿನ್ನತೆಗೆ ಒಳಗಾಗಿದ್ದರು ಎಂದು ಹಲವು ವಾಹಿನಿಗಳು ವರದಿ ಮಾಡಿದ್ದು, ಅವುಗಳನ್ನು ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ನಿಟ್ಟಿನಲ್ಲಿ ಮುಂಬೈ ಪೊಲೀಸರು ತನಿಖೆ ನಡೆಸಲಿದ್ದಾರೆ,’ ಎಂದು ಅವರು ತಿಳಿಸಿದ್ದಾರೆ. 

ಇನ್ನಷ್ಟು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು