ಲಾಲುಗೆ ಪ್ರಶಾಂತ್ ಸವಾಲು

ಶುಕ್ರವಾರ, ಏಪ್ರಿಲ್ 26, 2019
24 °C

ಲಾಲುಗೆ ಪ್ರಶಾಂತ್ ಸವಾಲು

Published:
Updated:
Prajavani

ಪಟ್ನಾ: ‘ನಾನು ಮತ್ತು ನೀವು ಮಾಧ್ಯಮಗಳ ಮುಂದೆ ಚರ್ಚೆಗೆ ಕುಳಿತುಕೊಳ್ಳೋಣ. ನಮ್ಮಿಬ್ಬರ ಮಧ್ಯೆ ನಡೆದ ಮಾತುಕತೆ ಏನು? ಯಾರಿಗೆ ಯಾರು, ಯಾವ ಆಫರ್ ನೀಡಿದರು ಎಂಬುದು ಜನರಿಗೆ ಗೊತ್ತಾಗಲಿದೆ’ ಎಂದು ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಅವರು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರಿಗೆ ಸವಾಲು ಹಾಕಿದ್ದಾರೆ.

ಎನ್‌ಡಿಎ ಜತೆ ಸೇರಿ ಸರ್ಕಾರ ರಚಿಸಿದ ನಂತರ ನಿತೀಶ್ ಕುಮಾರ್ ಮಹಾಘಟಬಂಧನಕ್ಕೆ ಹಿಂತಿರುಗಲು ಬಯಸಿದ್ದರು. ಈ ಸಂಬಂಧ ಮಾತುಕತೆ ನಡೆಸಲು ಪ್ರಶಾಂತ್ ಕಿಶೋರ್ ಅವರನ್ನು ಕಳುಹಿಸಿದ್ದರು ಎಂದು ಲಾಲು ಪ್ರಸಾದ್ ಅವರ ಜೀವನಚರಿತ್ರೆಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಪ್ರಶಾಂತ್ ಕಿಶೋರ್ ನಿರಾಕರಿಸಿದ್ದರು. ಪ್ರಶಾಂತ್ ಸುಳ್ಳು ಹೇಳುತ್ತಿದ್ದಾರೆ ಎಂದು ಲಾಲು ಪತ್ನಿ ರಾಬ್ಡಿ ದೇವಿ ತಿರುಗೇಟು ನೀಡಿದ್ದರು.

ಇದಕ್ಕೆ ಶನಿವಾರ ಬೆಳಿಗ್ಗೆ ಪ್ರಶಾಂತ್ ಅವರು ತಿರುಗೇಟು ನೀಡಿದ್ದಾರೆ. ‘ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಜೈಲಿನಲ್ಲಿ ಇರುವವರು, ತಾವೇ ಸತ್ಯದ ವಕ್ತಾರರು ಎಂಬಂತೆ ಮಾತನಾಡುತ್ತಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !