ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಲೆವೆಲ್ ಕ್ರಾಸಿಂಗ್ ಬೇಕಿದೆ ಲಕ್ಷ ಕೋಟಿ

Last Updated 3 ಜುಲೈ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಎಲ್ಲ ರೈಲ್ವೆ ಲೆವೆಲ್ ಕ್ರಾಸಿಂಗ್‌ಗಳಿಗೆ ಸಂಪೂರ್ಣ ಮುಕ್ತಿ ನೀಡಲು ಕೆಲವು ಲಕ್ಷ ಕೋಟಿ ರೂಪಾಯಿ ಅಗತ್ಯವಿದೆ ಎಂದು ಕೇಂದ್ರ ರೈಲ್ವೆ ಸಚಿವ ಪೀಯೂಷ್ ಗೋಯಲ್ ಅವರು ಹೇಳಿದ್ದಾರೆ. ಲೋಕಸಭೆಗೆ ಬುಧವಾರ ಉತ್ತರ ನೀಡಿದ ಅವರು ಇದಕ್ಕೆ ಕೆಲವು ವರ್ಷಗಳೇ ಹಿಡಿಯಲಿವೆ ಎಂದಿದ್ದಾರೆ. ಕ್ರಾಸಿಂಗ್‌ಗಳಿಗೆ ಬದಲಾಗಿ ಮೇಲ್ಸೇತುವೆ ಅಥವಾ ಕೆಳಸೇತುವೆಗಳ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ರೈಲ್ವೆ ಇಲಾಖೆ ಉದ್ದೇಶ.

ರೈಲ್ವೆ ಸಚಿವರು ಹೇಳಿದ್ದೇನು?

*ಎಲ್ಲ ಮಾನವಸಹಿತ ರೈಲ್ವೆ ಕ್ರಾಸಿಂಗ್‌ಗಳನ್ನು
ನಿವಾರಿಸುವ ಉದ್ದೇಶ

* ಕ್ರಾಸಿಂಗ್‌ಗಳಿಗೆ ಪರ್ಯಾಯವಾಗಿ ಮೇಲ್ಸೇತುವೆ, ಅಂಡರ್‌ಪಾಸ್ ನಿರ್ಮಾಣ

*2018ರ ಸೆಪ್ಟೆಂಬರ್ ತಿಂಗಳೊಂದರಲ್ಲೇ 1,714 ರೈಲ್ವೆ ಕ್ರಾಸಿಂಗ್‌ಗಳಿಗೆ ಪರ್ಯಾಯ ವ್ಯವಸ್ಥೆ

* ಜನವರಿ 2019ರಲ್ಲಿ ಬ್ರಾಡ್‌ಗೇಜ್ ಮಾರ್ಗದ ಎಲ್ಲ ಕಾವಲುರಹಿತ ಕ್ರಾಸಿಂಗ್‌ ತೆಗೆದುಹಾಕಲಾಯಿತು

* ಈ ಅವಧಿಯಲ್ಲಿ ಮೀಟರ್‌ಗೇಜ್‌ನ 348, ನ್ಯಾರೋಗೇಜ್‌ನ 700 ಲೆವೆಲ್
ಕ್ರಾಸಿಂಗ್‌ಗೆ ಮುಕ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT