ಭಾನುವಾರ, ಜೂನ್ 13, 2021
25 °C

ಪಾಲ್ಗರ್ ಪ್ರಕರಣ | ಸಾಧುಗಳೊಂದಿಗೆ ಮೃತಪಟ್ಟ ಚಾಲಕನ ಕುಟುಂಬದ ನೆರವಿಗೆ ನಿಂತ ರವೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಮೃತಪಟ್ಟ ಕಾರು ಚಾಲಕನ ಕುಟುಂಬಕ್ಕೆ ನೆರವು ನೀಡಲು ಬಾಲಿವುಡ್‌ ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ರವೀನಾ ಟಂಡನ್‌ ಮುಂದಾಗಿದ್ದಾರೆ.

ಇತ್ತೀಚೆಗೆ ಮಕ್ಕಳ ಕಳ್ಳರೆಂದು ಭಾವಿಸಿ ಇಬ್ಬರು ಸಾಧುಗಳು ಹಾಗೂ ಅವರನ್ನು ಕರೆ ತಂದಿದ್ದ ಕಾರು ಚಾಲಕನನ್ನು ಪಾಲ್ಗರ್‌ ಜಿಲ್ಲೆಯ ಗ್ರಾಮವೊಂದರ ಜನರು ಪೊಲೀಸರ ಎದುರೇ ದೊಣ್ಣೆಗಳಿಂದ ಹೊಡೆದು ಕೊಂದಿದ್ದರು. ಚಾಲಕನನ್ನು ಮುಂಬೈ ಮೂಲದ ನಿಲೇಶ್ ತೆಲ್ಗಡೆ (30) ಎಂದು ಗುರುತಿಸಲಾಗಿತ್ತು.

ಇದೀಗ ಚಾಲಕನ ಕಟುಂಬಕ್ಕೆ ರವೀನಾ ನೆರವಾಗಲು ಮುಂದಾಗಿರುವ ವಿಚಾರವನ್ನು ಬಿಜೆಪಿಯ ಮಾಜಿ ಶಾಸಕ ಮತ್ತು ಹಿರಿಯ ಮುಖಂಡ ಕೃಷ್ಣ ಹೆಗ್ಡೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಪೊಲೀಸರೆದುರೇ ಸಾಧುಗಳನ್ನು ಹೊಡೆದು ಹತ್ಯೆ, 101 ಬಂಧನ

‘ನನ್ನ ಸ್ನೇಹಿತೆ ಹಾಗೂ ನಟಿ, ಹೋರಾಟಗಾರ್ತಿ ರವೀನಾ ಟಂಟನ್‌ ಪಾಲ್ಗರ್‌ನಲ್ಲಿ ಮೃತಪಟ್ಟ ನಿಲೇಶ್‌ ತೆಲ್ಗಡೆ ಅವರ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಭರವಸೆ ನೀಡಿದ್ದಾರೆ. ಜೊತೆಗೆ ತಮ್ಮ ರುದ್ರಾ ಫೌಂಡೇಷನ್‌ ಮೂಲಕ ಆರ್ಥಿಕ ನೆರವನ್ನೂ ನೀಡಲಿದ್ದಾರೆ. ನಿಲೇಶ್‌ ಕುಟುಂಬಕ್ಕೆ ನೆರವಾಗುವಂತೆ ಅನೇಕ ಸ್ನೇಹಿತರೊಂದಿಗೂ ರವೀನಾ ಮಾತುಕತೆ ನಡೆಸಿದ್ದಾರೆ’ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು