ಒವೈಸಿ ಪ್ರಮಾಣ ವಚನ ಸ್ವೀಕಾರ ವೇಳೆ ಸಂಸತ್‌ನಲ್ಲಿ ‘ಭಾರತ್‌ ಮಾತಾಕೀ ಜೈ’ ಘೋಷಣೆ!

ಬುಧವಾರ, ಜೂಲೈ 17, 2019
29 °C

ಒವೈಸಿ ಪ್ರಮಾಣ ವಚನ ಸ್ವೀಕಾರ ವೇಳೆ ಸಂಸತ್‌ನಲ್ಲಿ ‘ಭಾರತ್‌ ಮಾತಾಕೀ ಜೈ’ ಘೋಷಣೆ!

Published:
Updated:

ನವದೆಹಲಿ: ಹೈದರಾಬಾದ್‌ನ ಎಐಎಂಐಎಂ ಸಂಸದ ಅಸಾದುದ್ದೀನ್‌ ಓವೈಸಿ ಅವರು ಮಂಗಳವಾರ ಸಂಸತ್‌ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ನಾಟಕೀಯ ಪ್ರಸಂಗವೊಂದು ನಡೆದಿದೆ. 

ಪ್ರಮಾಣ ವಚನ ಸ್ವೀಕರಿಸಲು ಓವೈಸಿ ಅವರು ಸಂಸತ್‌ನಲ್ಲಿ ಸ್ಪೀಕರ್‌ ಅವರ ಮುಂದಿನ ಬಾವಿಯ ಬಳಿಗೆ ನಡೆದು ಬರುತ್ತಿದ್ದ ವೇಳೆ, ಆಡಳಿತ ಪಕ್ಷದ ಸಂಸದರು ‘ಭಾರತ್‌ ಮಾತಾ ಕೀ ಜೈ,’ ‘ವಂದೇ ಮಾತರಂ,’ ಎಂದು ಕೂಗಿದರು. ಆಗ ಓವೈಸಿ ‘ಕೂಗಿರಿ... ಕೂಗಿರಿ..’ ಎಂದು ಹೇಳುತ್ತಲೇ ಮೈಕ್‌ ಬಳಿಗೆ ಬಂದರು. ನಂತರ ಅವರು ಸಂಸತ್‌ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. 

ಪ್ರಮಾಣ ವಚನ ಪೂರ್ಣಗೊಳಿಸಿದ ಒವೈಸಿ ಅವರು ಕೊನೆಯಲ್ಲಿ ‘ಜೈ ಭೀಮ್‌... ಜೈ ಭೀಮ್‌,  ತಕ್ಬೀರ್‌, ಅಲ್ಲಾ ಹು ಅಕ್ಬರ್‌, ಜೈ ಹಿಂದ್‌,’ ಎಂದು ಘೋಷಣೆ ಕೂಗಿ ಹಿಂದಿರುಗಿದರು.  ಓವೈಸಿ ಅವರ ಈ ಘೋಷಣೆಯನ್ನೂ ಕೆಲ ಸಂಸದರು ಅಣಕಿಸಿದರು. ‘ಓ...,’ ಎಂದು ಕೂಗಿದರು. 

ಬರಹ ಇಷ್ಟವಾಯಿತೆ?

  • 24

    Happy
  • 2

    Amused
  • 2

    Sad
  • 2

    Frustrated
  • 7

    Angry

Comments:

0 comments

Write the first review for this !