ಭಾನುವಾರ, ಜನವರಿ 17, 2021
28 °C

'ರಾಹುಲ್‌ನ್ನು ಅವಮಾನಿಸುವುದಕ್ಕಾಗಿಯೇ ಸ್ಮೃತಿ ಅಮೇಠಿಯಲ್ಲಿ ಚಪ್ಪಲಿ ವಿತರಿಸಿದ್ದು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಹುಲ್ ಗಾಂಧಿಯನ್ನು ಅವಮಾನಿಸುವುದಕ್ಕಾಗಿಯೇ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅಮೇಠಿಯಲ್ಲಿ ಚಪ್ಪಲಿ ವಿತರಿಸಿದ್ದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

 ಸ್ಮೃತಿ ಇರಾನಿ ಇಲ್ಲಿಗೆ ಬಂದು ಜನರಿಗೆ ಚಪ್ಪಲಿ ವಿತರಿಸಿದ್ದಾರೆ. ಅಮೇಠಿಯಲ್ಲಿರುವ ಜನರಿಗೆ ಧರಿಸಲು ಚಪ್ಪಲಿ ಇಲ್ಲ ಎಂದು ಅವರಿಗೆ ತೋರಿಸಿಕೊಡಬೇಕಾಗಿತ್ತು. ರಾಹುಲ್ ಗಾಂಧಿಯನ್ನು ಅವಮಾನಿಸುವುದೇ ಅವರ ಉದ್ದೇಶವಾಗಿತ್ತು. ಅವರು ಅಮೇಠಿಯ ಜನರನ್ನೇ ಅವಮಾನಿಸಿದ್ದಾರೆ ಎಂದಿದ್ದಾರೆ ಪ್ರಿಯಾಂಕಾ.

ಪ್ರಿಯಾಂಕಾ ಅವರ ಈ ಟೀಕೆಗೆ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ, ನಾನು ನಟಿ ಆಗಿದ್ದರೂ ಪ್ರಿಯಾಂಕಾ ಚೆನ್ನಾಗಿ ನಾಟಕ ಮಾಡುತ್ತಾರೆ. ಅಲ್ಲಿಯ ಜನರಿಗೆ ಧರಿಸಲು ಶೂ ಇಲ್ಲ, ಅವರಿಗೆ ಒಂದಷ್ಟು ಮರ್ಯಾದೆ ಇದ್ದರೆ ಅಲ್ಲಿಗೆ ಹೋಗಿ ನೋಡಲಿ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು