ಮಂಗಳವಾರ, ಫೆಬ್ರವರಿ 18, 2020
20 °C

ಸಂಸ್ಕೃತ ಮಾತನಾಡಿದರೆ ಸಕ್ಕರೆ ಕಾಯಿಲೆ, ಕೊಬ್ಬು ಮಾಯವಾಗುತ್ತದೆ: ಬಿಜೆಪಿ ಸಂಸದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸಂಸ್ಕೃತವನ್ನು ಮಾತನಾಡಿದರೆ ಮಾನವನ ದೇಹದ ನರಮಂಡಲವು ಅಭಿವೃದ್ಧಿಯಾಗುತ್ತದೆ. ಸಕ್ಕರೆ ಕಾಯಿಲೆ ಮತ್ತು ಕೊಬ್ಬಿನಾಂಶವನ್ನು ಹತೋಟಿಯಲ್ಲಿರಿಸುತ್ತದೆ ಎಂದು ಬಿಜೆಪಿ ಸಂಸದ ಗಣೇಶ್ ಸಿಂಗ್ ಹೇಳಿದ್ದಾರೆ.

ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯಗಳ ಮಸೂದೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಮೆರಿಕ ಮೂಲದ ಶೈಕ್ಷಣಿಕ ಸಂಸ್ಥೆಯ ಸಂಶೋಧನೆಯಲ್ಲಿ ಪ್ರತಿನಿತ್ಯ ಸಂಸ್ಕೃತವನ್ನು ಮಾತನಾಡಿದರೆ ಮಾನವನ ನರಮಂಡಲಕ್ಕೆ ಉತ್ತೇಜನ ಸಿಗುತ್ತದೆ. ದೇಹದಲ್ಲಿರುವ ಸಕ್ಕರೆ ಕಾಯಿಲೆ ಮತ್ತು ಕೊಬ್ಬಿನಾಂಶವು ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಿದ್ದಾರೆ. 

ಅಲ್ಲದೆ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಸಂಶೋಧನೆ ಪ್ರಕಾರ, ಸಂಸ್ಕೃತದಲ್ಲಿ ಕಂಪ್ಯೂಟರ್ ಪ್ರೋಗ್ರಾಮಿಂಗ್ ಅನ್ನು ಮಾಡಿದರೆ ಅದು ದೋಷ ರಹಿತವಾಗಿರುತ್ತದೆ. ಕೆಲ ಇಸ್ಲಾಮಿಕ್ ಭಾಷೆಗಳು ಸೇರಿದಂತೆ ವಿಶ್ವದಲ್ಲಿರುವ ಶೇ. 97ಕ್ಕೂ ಅಧಿಕ ಭಾಷೆಗಳು ಸಂಸ್ಕೃತವನ್ನಾಧರಿಸಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬನಾರಸ್‌ ವಿವಿ: ಮುಸ್ಲಿಂ ಪ್ರೊಫೆಸರ್ ನೇಮಕ, ಪ್ರತಿಭಟನೆ ಹಿಂಪಡೆದ ವಿದ್ಯಾರ್ಥಿಗಳು 

ಸಂಸ್ಕೃತದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ, ಈ ಭಾಷೆಯು ಅತ್ಯಂತ ಸುಲಭವಾಗಿದೆ ಮತ್ತು ಒಂದೇ ವಾಕ್ಯವನ್ನು ಹಲವು ವಿಧಗಳಲ್ಲಿ ಮಾತನಾಡಬಹುದು. ಬ್ರದರ್ ಮತ್ತು ಕೌ (brother and cow) ಸೇರಿದಂತೆ ಹಲವಾರು ಇಂಗ್ಲಿಷ್ ಪದಗಳನ್ನು ಸಂಸ್ಕೃತದಿಂದ ಪಡೆಯಲಾಗಿದೆ. ಪ್ರಾಚೀನ ಭಾಷೆಯನ್ನು ಪ್ರಚಾರ ಮಾಡುವುದರಿಂದಾಗಿ ಇತರ ಭಾಷೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು