ಮಂಗಳವಾರ, ಮೇ 18, 2021
28 °C

ಸಂಧಾನ ಸಮಿತಿಯಿಂದ ಶ್ರೀ ಶ್ರೀ ರವಿಶಂಕರ್ ಕೈಬಿಡಲು ಮನವಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮಥುರಾ: ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದದ ಇತ್ಯರ್ಥಕ್ಕೆ ಬಂಧಿಸಿದಂತೆ ಸುಪ್ರೀಂ ಕೋರ್ಟ್‌ ರಚಿಸಿರುವ ಸಂಧಾನ ಸಮಿತಿಯಿಂದ ಶ್ರೀ ಶ್ರೀ ರವಿಶಂಕರ್ ಅವರನ್ನು ಕೈಬಿಡಬೇಕು ಎಂದು ಧಾರ್ಮಿಕ ಮುಖಂಡ ಅಧೋಕ್ಷಜಾನಂದ ತೀರ್ಥ ಮಹಾರಾಜ್‌ ಶನಿವಾರ ಮನವಿ ಮಾಡಿದ್ದಾರೆ. 

‘ಸಂಧಾನ ಸಮಿತಿ ರಚಿಸುವ ಮೂಲಕ ವಿವಾದವನ್ನು ಸೌಹಾರ್ದವಾಗಿ ಪರಿಹರಿಸಬೇಕು ಎಂಬ ಸುಪ್ರೀಂ ಕೋರ್ಟ್‌ ನಿರ್ಧಾರವನ್ನು ಗೌರವಿಸುತ್ತೇನೆ. ಆದರೆ ರವಿಶಂಕರ್ ಅವರನ್ನು ಕೈಬಿಡಬೇಕು. ಏಕೆಂದರೆ ಅವರು ಈ ಹಿಂದೆ ಸಂಧಾನ ಸೂತ್ರದಲ್ಲಿ ಸೋಲು ಕಂಡಿದ್ದಾರೆ. ಆದ್ದರಿಂದ ಎರಡೂ ಕಡೆಯಿಂದ ಅವರನ್ನು ಮತ್ತು ಅವರ ಸಂಧಾನ ಸೂತ್ರವನ್ನು ಗಂಭೀರವಾಗಿ ಪರಿಗಣಿಸಲಾಗದು’ ಎಂದು ಮಹಾರಾಜ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ರವಿಶಂಕರ್‌ ಅವರ ವಿರುದ್ಧ ನನಗೆ ಯಾವುದೇ ದ್ವೇಷ ಇಲ್ಲ. ತಾಳ್ಮೆ ಹೊಂದಿರುವ ಸಮರ್ಥ ವ್ಯಕ್ತಿ ಮಾತ್ರವೇ ಸಂಧಾನಕ್ಕೆ ಯಶಸ್ಸು ತಂದುಕೊಡಬಲ್ಲರು’ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಫ್‌.ಎಂ.ಇಬ್ರಾಹಿಂ ಕಲೀಫುಲ್ಲಾ, ಆರ್ಟ್‌ ಆಫ್‌ ಲೀವಿಂಗ್‌ ಫೌಂಡೇಷನ್‌ನ ಶ್ರೀಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಶ್ರೀರಾಮ್ ಪಂಚು ಅವರನ್ನೊಳಗೊಂಡ ಸಂಧಾನ ಸಮಿತಿಯನ್ನು ಸುಪ್ರೀಂ ಇತ್ತೀಚೆಗೆ ರಚಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು